ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ ಗೊತ್ತಿರುವುದಿಲ್ಲ. ಅಂದರೆ ಅರಿವಿಗೆ ಎಟಕದ ರೂಪದಲ್ಲಿ ಆ ಪದಗಳ ಒಳರಚನೆ ಆಗಿರುತ್ತದೆ. ಅಂತಹ ಪದಗಳಲ್ಲಿ ಅಡಗಿರುವ ಗುಟ್ಟನ್ನು ಇಲ್ಲಿ ರಟ್ಟು ಮಾಡಿ ಅರಿವಿಗೆ ಎಟಕುವ ತೆರದಲ್ಲಿ ತೆರೆದಿಡಲಾಗಿದೆ. ಇದರಿಂದ ನಮ್ಮ ಪದದರಿಮೆ ಹೆಚ್ಚಿ ನಮ್ಮ ಪದಕಸುವನ್ನು ಇನ್ನು ಚೆನ್ನಾಗಿ ಕನ್ನಡಬರಹಗಳಲ್ಲಿ ದುಡಿಸಿಕೊಳ್ಳಬಹುದಲ್ಲದೆ ಕನ್ನಡ ’ಪದಬರ’ವನ್ನು ಹೋಗಲಾಡಿಸಬಹುದು ಎಂಬುದನ್ನ ತೋರಿಸಿಕೊಡುವುದೇ ಈ ಮಿಂಬರಹದ(ಬ್ಲಾಗಿನ) ಗುರಿ.
ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.
No comments:
Post a Comment