ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ ಗೊತ್ತಿರುವುದಿಲ್ಲ. ಅಂದರೆ ಅರಿವಿಗೆ ಎಟಕದ ರೂಪದಲ್ಲಿ ಆ ಪದಗಳ ಒಳರಚನೆ ಆಗಿರುತ್ತದೆ. ಅಂತಹ ಪದಗಳಲ್ಲಿ ಅಡಗಿರುವ ಗುಟ್ಟನ್ನು ಇಲ್ಲಿ ರಟ್ಟು ಮಾಡಿ ಅರಿವಿಗೆ ಎಟಕುವ ತೆರದಲ್ಲಿ ತೆರೆದಿಡಲಾಗಿದೆ. ಇದರಿಂದ ನಮ್ಮ ಪದದರಿಮೆ ಹೆಚ್ಚಿ ನಮ್ಮ ಪದಕಸುವನ್ನು ಇನ್ನು ಚೆನ್ನಾಗಿ ಕನ್ನಡಬರಹಗಳಲ್ಲಿ ದುಡಿಸಿಕೊಳ್ಳಬಹುದಲ್ಲದೆ ಕನ್ನಡ ’ಪದಬರ’ವನ್ನು ಹೋಗಲಾಡಿಸಬಹುದು ಎಂಬುದನ್ನ ತೋರಿಸಿಕೊಡುವುದೇ ಈ ಮಿಂಬರಹದ(ಬ್ಲಾಗಿನ) ಗುರಿ.
ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.
Thursday, April 6, 2017
Saturday, November 19, 2016
ಕನಕಪುರ ಅಲ್ಲ 'ಕಾನ್-ಕಾನಳ್ಳಿ'
ಬೆಂಗಳೂರಿನಿಂದ ಸುಮಾರು ೧೨ ಹರದಾರಿ (೬೦ ಕಿ.ಮೀ) ದೂರ ಇರುವ ಊರಿಗೆ ಈಗ 'ಕನಕಪುರ' ಎಂದು ಹೇಳಲಾಗುತ್ತದೆ. ಆದರೆ ಕನ್ನಡ ವಿಕಿಪಿಡಿಯಾದಲ್ಲಿ ಹೀಗೆ ಹೇಳಲಾಗಿದೆ.
ಕಾಣಿಕಾರನ ಹಳ್ಳಿ: ಕಾಣಿಕಾರರಿಗೋಸ್ಕರವೇ ಯಾಕೆ ಹಳ್ಳಿಯನ್ನು ಕಟ್ಟಲಾಯಿತು ಇಲ್ಲವೆ ಇಲ್ಲಿದ್ದವರೆಲ್ಲ ಕಾಣಿಕಾರರೇ? ಈ ಕೇಳ್ವಿಗಳಿಗೆ ಉತ್ತರ ದೊರೆಯುವುದು ಕಶ್ಟ. ಹೀಗೆ ಕಾಣಿಕಾರರಿಗೆ ಹಳ್ಳಿಯನ್ನು ಕಟ್ಟುವ ಪರಿಪಾಟ ಇದ್ದರೆ ಇದೇ ಹೆಸರಿನ ಊರಿನ ಹೆಸರುಗಳು ನಮಗೆ ಬೇರೆ ಕಡೆಗಳಲ್ಲಿಯೂ ಕಾಣಸಿಗಬೇಕಿತ್ತು. ಆದರೆ ಬೇರೆ ಕಡೆ ಕಾಣಸಿಗುವುದಿಲ್ಲ.
ಕನ್ಯಾ-ಕರ್ಣ ಹಳ್ಳಿ: ಹೆಚ್ಚಿನ ಮಂದಿಗೆ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಸಿ ಊರಿಗೆ ಹೆಸರು ಕೊಡುವುದಕ್ಕೆ ಯಾವುದೇ ತೆರಹು ಇಲ್ಲ ಯಾಕಂದರೆ ಕನ್ನಡ ನಾಡಿನ ಊರುಗಳ ಹೆಸರುಗಳೆಲ್ಲ ಹೆಚ್ಚಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿರುತ್ತಾರೆ.
ಇವೆರಡೂ ಬಿಡಿಸಿಕೆಗಳ ಆಚೆ ನೋಡಿದರೆ ಮಯ್ಸೂರು ಸೀಮೆಯಲ್ಲಿ (ಬೆಂಗಳೂರು ಮತ್ತು ಮಯ್ಸೂರಿನ ಸುತ್ತಮುತ್ತ) 'ಕನ್ನ' ಎಂಬ ಪದವಿರುವ ಹಲವು ಊರುಗಳ ಹೆಸರು ಸಿಗುತ್ತವೆ. ಅಲ್ಲದೆ ಕೊಲ್ಲಾಪುರ, ಊಟಿಯಲ್ಲೂ ಕೂಡ ಕಾಣಸಿಗುತ್ತವೆ.
ಕನ್ನಂಬಾಡಿ (ಕೆ.ಅರ್.ಎಸ್)
ಕನ್ನಳ್ಳಿ, ಕನ್ನಹಳ್ಳಿ(ಮಳವಳ್ಳಿ ಮತ್ತು ಬೆಂಗಳೂರ ಹತ್ತಿರ)
ಚಿಕ್ಕಕನ್ನಹಳ್ಳಿ, ದೊಡ್ಡಕನ್ನಹಳ್ಳಿ (ಬೆಂಗಳೂರಿನ ಸರ್ಜಾಪುರದ ದಾರಿಯಲ್ಲಿ)
ಕನ್ನಮಂಗಲ (ಬೆಂಗಳೂರು)
ಕನ್ನೇಗವ್ಡನ ಕೊಪ್ಪಲು(ಮಯ್ಸೂರು)
ಕನ್ನೇನಹಳ್ಳಿ (ತುಮಕೂರು)
ಕಾನೇರಿ(ಕೊಲ್ಲಾಪುರ)
ಕನ್ನೇರಿ (ಊಟಿ)
ಆದ್ದರಿಂದ 'ಕನಕಪುರ'ದ ದಿಟವಾದ ಹೆಸರು 'ಕನ್ನಹಳ್ಳಿ' ಎಂದು ಎಣಿಸಬಹುದು. ಈ ಕನ್ನಹಳ್ಳಿಯನ್ನು ಬೇರೆ ಕನ್ನಹಳ್ಳಿಗಳಿಂದ ಬೇರೆಯಾಗಿಸಲು ಬಹುಶಹ 'ಕನ್ನಕನ್ನ' ಎಂದು ಎರಡು ಸಲ ಸೇರಿಸಿ 'ಕನ್ನಕನ್ನಹಳ್ಳಿ' ಎಂದು ಹೇಳಹೊರಟಾಗ
'ಕನ್-ಕನ್ನಳ್ಳಿ' ಆಗಿ, ಅದನ್ನೇ ದಿನಬಳಕೆಯ ನೆಲೆಯಲ್ಲಿ ಬೇಗ ಹೇಳುವಾಗ ಕಾನ್-ಕಾನಳ್ಳಿ ಎಂದಾಗಿರಬೇಕು ಎಂದು ಎಣಿಸುವುದಕ್ಕೆ ಎಡೆಯಿದೆ.
ಹಾಗಾದರೆ, ಈ 'ಕನ್ನ'ರು ಯಾರು ಎಂಬುದನ್ನು ಮುಂದಿನ ಪದಗುಟ್ಟಿನಲ್ಲಿ ತಿಳಿಯೋಣ
1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು.'ಕಾನ್-ಕಾನಳ್ಳಿ' ಎಂದೇ ಮಂದಿಯ ಬಾಯಲ್ಲಿ ಇರುವ ಹೆಸರು. ಕಾಣಿಕಾರನ ಹಳ್ಳಿ ಎಂಬುದು ಇದರ ಮೊದಲ ಹೆಸರೆಂದು ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ಇದು ಸಂಸ್ಕ್ರುತದ ಕನ್ಯಾ-ಕರ್ಣ('ಭವಾನಿ'ಯ ಕಿವಿ) ಪದವಾಗಿದ್ದಿರಬಹುದೆಂದು ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದು, ಅದರಲ್ಲಿ ಹೀಗೆ ಹೇಳಿದ್ದಾನೆ:-
ಕಾಣಿಕಾರನ ಹಳ್ಳಿ: ಕಾಣಿಕಾರರಿಗೋಸ್ಕರವೇ ಯಾಕೆ ಹಳ್ಳಿಯನ್ನು ಕಟ್ಟಲಾಯಿತು ಇಲ್ಲವೆ ಇಲ್ಲಿದ್ದವರೆಲ್ಲ ಕಾಣಿಕಾರರೇ? ಈ ಕೇಳ್ವಿಗಳಿಗೆ ಉತ್ತರ ದೊರೆಯುವುದು ಕಶ್ಟ. ಹೀಗೆ ಕಾಣಿಕಾರರಿಗೆ ಹಳ್ಳಿಯನ್ನು ಕಟ್ಟುವ ಪರಿಪಾಟ ಇದ್ದರೆ ಇದೇ ಹೆಸರಿನ ಊರಿನ ಹೆಸರುಗಳು ನಮಗೆ ಬೇರೆ ಕಡೆಗಳಲ್ಲಿಯೂ ಕಾಣಸಿಗಬೇಕಿತ್ತು. ಆದರೆ ಬೇರೆ ಕಡೆ ಕಾಣಸಿಗುವುದಿಲ್ಲ.
ಕನ್ಯಾ-ಕರ್ಣ ಹಳ್ಳಿ: ಹೆಚ್ಚಿನ ಮಂದಿಗೆ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಸಿ ಊರಿಗೆ ಹೆಸರು ಕೊಡುವುದಕ್ಕೆ ಯಾವುದೇ ತೆರಹು ಇಲ್ಲ ಯಾಕಂದರೆ ಕನ್ನಡ ನಾಡಿನ ಊರುಗಳ ಹೆಸರುಗಳೆಲ್ಲ ಹೆಚ್ಚಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿರುತ್ತಾರೆ.
ಇವೆರಡೂ ಬಿಡಿಸಿಕೆಗಳ ಆಚೆ ನೋಡಿದರೆ ಮಯ್ಸೂರು ಸೀಮೆಯಲ್ಲಿ (ಬೆಂಗಳೂರು ಮತ್ತು ಮಯ್ಸೂರಿನ ಸುತ್ತಮುತ್ತ) 'ಕನ್ನ' ಎಂಬ ಪದವಿರುವ ಹಲವು ಊರುಗಳ ಹೆಸರು ಸಿಗುತ್ತವೆ. ಅಲ್ಲದೆ ಕೊಲ್ಲಾಪುರ, ಊಟಿಯಲ್ಲೂ ಕೂಡ ಕಾಣಸಿಗುತ್ತವೆ.
ಕನ್ನಂಬಾಡಿ (ಕೆ.ಅರ್.ಎಸ್)
ಕನ್ನಳ್ಳಿ, ಕನ್ನಹಳ್ಳಿ(ಮಳವಳ್ಳಿ ಮತ್ತು ಬೆಂಗಳೂರ ಹತ್ತಿರ)
ಚಿಕ್ಕಕನ್ನಹಳ್ಳಿ, ದೊಡ್ಡಕನ್ನಹಳ್ಳಿ (ಬೆಂಗಳೂರಿನ ಸರ್ಜಾಪುರದ ದಾರಿಯಲ್ಲಿ)
ಕನ್ನಮಂಗಲ (ಬೆಂಗಳೂರು)
ಕನ್ನೇಗವ್ಡನ ಕೊಪ್ಪಲು(ಮಯ್ಸೂರು)
ಕನ್ನೇನಹಳ್ಳಿ (ತುಮಕೂರು)
ಕಾನೇರಿ(ಕೊಲ್ಲಾಪುರ)
ಕನ್ನೇರಿ (ಊಟಿ)
ಆದ್ದರಿಂದ 'ಕನಕಪುರ'ದ ದಿಟವಾದ ಹೆಸರು 'ಕನ್ನಹಳ್ಳಿ' ಎಂದು ಎಣಿಸಬಹುದು. ಈ ಕನ್ನಹಳ್ಳಿಯನ್ನು ಬೇರೆ ಕನ್ನಹಳ್ಳಿಗಳಿಂದ ಬೇರೆಯಾಗಿಸಲು ಬಹುಶಹ 'ಕನ್ನಕನ್ನ' ಎಂದು ಎರಡು ಸಲ ಸೇರಿಸಿ 'ಕನ್ನಕನ್ನಹಳ್ಳಿ' ಎಂದು ಹೇಳಹೊರಟಾಗ
'ಕನ್-ಕನ್ನಳ್ಳಿ' ಆಗಿ, ಅದನ್ನೇ ದಿನಬಳಕೆಯ ನೆಲೆಯಲ್ಲಿ ಬೇಗ ಹೇಳುವಾಗ ಕಾನ್-ಕಾನಳ್ಳಿ ಎಂದಾಗಿರಬೇಕು ಎಂದು ಎಣಿಸುವುದಕ್ಕೆ ಎಡೆಯಿದೆ.
ಹಾಗಾದರೆ, ಈ 'ಕನ್ನ'ರು ಯಾರು ಎಂಬುದನ್ನು ಮುಂದಿನ ಪದಗುಟ್ಟಿನಲ್ಲಿ ತಿಳಿಯೋಣ
Saturday, November 12, 2016
ಗಗನ ಚುಕ್ಕಿ ಅಲ್ಲ 'ಗಂಗನ ಚುಕ್ಕಿ'
ಮಳವಳ್ಳಿಯಿಂದ ಸತ್ತೇಗಾಲಕ್ಕೆ ಹೋಗುವಾಗ ಸಿಗುವ ಶಿವನ ಸಮುದ್ರದಲ್ಲಿ ಇರುವ ಅಬ್ಬಿಗೆ 'ಗಗನ ಚುಕ್ಕಿ' ಎಂಬ ಹೆಸರು ಈಗ ಬಳಕೆಯಲ್ಲಿದೆ. ಇಲ್ಲಿ 'ಗಗನ'(ಕನ್ನಡದ ಬಾನು) ಎಂಬುದು ಸಂಸ್ಕ್ರುತ ಪದ ಎಂಬುದಾಗಿ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ 'ಗಗನ' ಎಂಬುದು 'ಗಂಗನ'(of Ganga) ಎಂಬುದರ ಮಾರ್ಪಾಟು ಎಂಬುದಕ್ಕೆ ದೂಸರಿದೆ.
ವಿಜಯನಗರದ ಕಾಲದಲ್ಲಿ ಆಗಿನ ಅರಸರು ಆನೆಗುಂದಿ ಅರಸುಮನೆತನಕ್ಕೆ ಸೇರಿದ 'ಗಂಗರಾಜ'ನೆಂಬುವನನ್ನು ಶಿವನಸಮುದ್ರವೆಂಬ ನಡುಗಡ್ಡೆಯನ್ನು ಆಳಲು ಕಳಿಸಿದರು. ಗಂಗರಾಜನು ಇಲ್ಲೇ ಒಂದು ಪಟ್ಟಣವನ್ನು ಕಟ್ಟಿ ಇಲ್ಲೇ ಆಳುತ್ತಿದ್ದನು. ಹಾಗಾಗಿ ಇದಕ್ಕೆ 'ಗಂಗನ ಚುಕ್ಕಿ' ಎಂಬ ಹೆಸರು ಬಂದಿತು.
೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-

Monday, October 24, 2016
ಬಿಡದಿ ಅಲ್ಲ ಬಿರಡಿ
ಬೆಂಗಳೂರಿನಿಂದ ಮಯ್ಸೂರಿಗೆ ಹೋಗುವಾಗ, ಕೆಂಗೇರಿ ಆದ ಮೇಲೆ ಸಿಗುವ ಊರೇ 'ಬಿಡದಿ'. ಮಯ್ಸೂರಿನಿಂದ ಬೆಂಗಳೂರಿಗೆ ಬರುವವರು ಇಲ್ಲಿ 'ಬೀಡು' ಬಿಟ್ಟು ಪಯಣದ ದಣಿವನ್ನು ಆರಿಸಿಕೊಂಡು ಮುಂದೆ ಬೆಂಗಳೂರಿನ ಕಡೆಗೆ ಹೋಗುತ್ತಿದ್ದರು ಎಂಬ ಮಾತಿದೆ. ಹಾಗಾಗಿ ಇದಕ್ಕೆ 'ಬಿಡದಿ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.
ಬಿಡದಿ biḍadi lodgings provided for visitors [DED 5393]
ಆದರೆ, ಇದರ ಮೊದಲ ಹೆಸರು ಬಿಡದಿಯಾಗಿರಲಿಲ್ಲ; 'ಬಿರಡೆ'ಯಾಗಿತ್ತು. ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-
ಅಂದರೆ ೧೮೦೦ ರಲ್ಲಿ ಬಿಡದಿಯ ಹೆಸರು ಬಿರಡಿ/ಬಿರಡೆ ಎಂದೇ ಇತ್ತು. ಆಮೇಲೆ, ಹೆಚ್ಚಾಗಿ ಪಯಣಿಗರು ಅಲ್ಲಿ ಬಂದು ಬಿಡಾರ/ಬಿಡದಿ ಹೂಡಲು ಶುರು ಮಾಡಿದ ಮೇಲೆ 'ಬಿರಡಿ' ಎಂಬುದೇ ಮೆಲ್ಲಗೆ 'ಬಿಡದಿ' ಎಂದು ಮಾರ್ಪಾಟಾಗಿರಬಹುದು.
ಬೆಂಗಳೂರಿನ ಸುತ್ತಮುತ್ತ ಮರದ ಹೆಸರಿರುವ ಊರುಗಳು ಕಾಣ ಸಿಗುತ್ತವೆ.
ಎತ್ತುಗೆಗೆ, ಹುಳಿಮಾವು, ಹಲಸೂರು, ಕಗ್ಗಲೀಪುರ

೧೩ ಮೇ, ೧೮೦೦: ನಾನು 'ಬಿರಡೆ'(ಬಿರಡಿ) ಎಂಬ ಊರಿಗೆ ಹೋದೆ. ಬಿರಡೆ ಎಂಬ ಮರದ ಹೆಸರಿಂದನೇ ಈ ಊರಿಗೆ 'ಬಿರಡೆ' ಎಂಬ ಹೆಸರು ಬಂದಿದೆ. ಅದನ್ನು Pterocarpus Sissoo ಎಂಬ ಗಿಡದರಿಮೆಯ ಹೆಸರಿನಿಂದ ಗುರುತಿಸಲಾಗಿದೆ.ಇದನ್ನೇ ಕನ್ನಡ ಸಾಹಿತ್ಯ ಪರಿಶತ್ತಿನ ನಿಗಂಟಿನಲ್ಲಿ ಹೀಗೆ ಕೊಡಲಾಗಿದೆ. ಬೇವು ತಾಳೆ ಮರಗಳ ಹಾಗೆ ಈ ಮರವೂ ಎತ್ತರಕ್ಕೆ ಬೆಳೆಯುವ ಮರವೆಂದು ಇದರಲ್ಲಿ ವಿವರಸಲಾಗಿದೆ.
ಅಂದರೆ ೧೮೦೦ ರಲ್ಲಿ ಬಿಡದಿಯ ಹೆಸರು ಬಿರಡಿ/ಬಿರಡೆ ಎಂದೇ ಇತ್ತು. ಆಮೇಲೆ, ಹೆಚ್ಚಾಗಿ ಪಯಣಿಗರು ಅಲ್ಲಿ ಬಂದು ಬಿಡಾರ/ಬಿಡದಿ ಹೂಡಲು ಶುರು ಮಾಡಿದ ಮೇಲೆ 'ಬಿರಡಿ' ಎಂಬುದೇ ಮೆಲ್ಲಗೆ 'ಬಿಡದಿ' ಎಂದು ಮಾರ್ಪಾಟಾಗಿರಬಹುದು.
ಬೆಂಗಳೂರಿನ ಸುತ್ತಮುತ್ತ ಮರದ ಹೆಸರಿರುವ ಊರುಗಳು ಕಾಣ ಸಿಗುತ್ತವೆ.
ಎತ್ತುಗೆಗೆ, ಹುಳಿಮಾವು, ಹಲಸೂರು, ಕಗ್ಗಲೀಪುರ
Wednesday, August 10, 2016
ಅಣ್ಣ
ಅಣ್ಣ ಎಂಬ ಪದವನ್ನು ಹಲವು ತೆರದಲ್ಲಿ ಬಳಸುವುದುಂಟು:-
೧. ತನಗಿಂತ ಮೊದಲೇ, ಒಡ ಹುಟ್ಟಿದವನನ್ನು ಕರೆಯಲು 'ಅಣ್ಣ' ಹೆಚ್ಚು ಬಳಕೆಯಲ್ಲಿದೆ. ಅಂದರೆ ಹರೆಯದಲ್ಲಿ ದೊಡ್ಡವನು. ಅವಳಿ-ಜವಳಿ ಮಕ್ಕಳಲ್ಲೂ ಒಂದೆರಡು ನಿಮಿಶ ಮುಂಚೆ ಹುಟ್ಟಿದವನೇ ಅಣ್ಣನಾಗುತ್ತಾನೆ.
೨. ತನಗಿಂತ ದೊಡ್ಡವರಾದ ಗಂಡಸರಲ್ಲಿ ಹೆಚ್ಚಿನವರನ್ನು 'ಅಣ್ಣ' ಎಂದು ಕರೆಯುವುದುಂಟು. ಅಲ್ಲದೆ ಅವರಿಗೆ ಮದಿಪು ಕೊಟ್ಟು ಮಾತಾಡಿಸುವ ದಾರಿಯೂ ಹವ್ದು.
ಅಣ್ಣ, ಅಣ Ka. aṇṇa, aṇa elder brother; respectful address to an older male, affectionate mode of addressing boys; ಅಣ್ಣಿ aṇṇi affectionate mode of addressing females [DED 131]
ಹಾಗಾದರೆ 'ಅಣ್ಣ' ಎಂಬ ಪದದ ಹಿಂದಿರುವ ಗುಟ್ಟೇನು? ಅಣ್ಣ ಎಂಬುದಕ್ಕೆ ಬೇರೊಂದು ಹುರುಳು ಸಿಗುತ್ತದೆ.
ಅಣ್ಣೆ, ಅಣ್ಣ, ಅಣ Ka. aṇṇe, aṇṇa, aṇa excellence, purity [DED 110]
ಅಂದರೆ 'ಅಣ್ಣ' ಎಂಬುದು ಮೇಲ್ಮಟ್ಟದ ಒಂದು ಪರಿಚೆಯನ್ನು ತಿಳಿಸುತ್ತದೆ.
ಅಣ್ಣಾಲಿಗೆ (ಅಣ್ಣ+ನಾಲಿಗೆ) aṇṇālige uvula [DED 110]
ಬಾಯಿ ಒಳಗೆ ಮೇಲಿನಿಂದ ಜೋತು ಬಿದ್ದ ನಾಲಿಗೆಗೆ ಅಣ್ಣಾಲಿಗೆ ಎನ್ನುತ್ತಾರೆ. ಇಲ್ಲೂ 'ಮೇಲೆ' ಎಂಬ ಹುರುಳನ್ನು ಇದು ಸೂಚಿಸುತ್ತಿರುವುದನ್ನು ಗಮನಿಸಬಹುದು.
ಇನ್ನು ನಮ್ಮದೇ ಆದ ತುಳುವಿನಲ್ಲಿ ಈ ಕೆಳಕಂಡ ಪದಗಳು ಈ ಹುರುಳನ್ನೇ ತೋರಿಸುತ್ತದೆ.
ಅಣಾವುನಿ, ಅಣ್ಣಾವುನಿ Tu. aṇāvuni, aṇṇāvuni to look up, lift up the face, gaze [DED 110]
ಇದಲ್ಲದೆ ಮಯ್ಸೂರು ಕಡೆ ಆಡುನುಡಿಯಲ್ಲಿರುವ ಬಳಕೆಯಿದೆ
೧. ವಸಿ ಅನ್-ತ್-ಕೊ, ಮುಕ ಸರಿಯಾಗ್ ನೋಡಂವ್ [ಕೊಂಚ ಮೇಲೆ ಮಾಡು, ಮುಕವನ್ನು ಸರಿಯಾಗಿ ನೋಡೋಣ]
೨. ಅನ್-ತ್-ಕೊಂಡ್ ನೋಡು..ಆವಾಗ್ ಕಾಣುತ್ತೆ
'ಅಣ' ಎಂಬ ಪದಕ್ಕೆ 'ತ್' ಎಂಬ ಒಟ್ಟು( ಹಿಂಬೊತ್ತಿನ) ಸೇರಿದ್ದರಿಂದ ಅಲ್ಲಿ ಉಲಿ ಮಾರ್ಪಾಟಾಗಿ 'ಅನ್' (ಅನ್-ತ್) ಎಂದಾಗಿದೆ ಯಾಕಂದರೆ ಮುಂದೆ 'ತ' ಇದ್ದರೆ 'ಣ'ಕಾರ ಉಲಿಯಲು ಬರುವುದಿಲ್ಲ, ಅದು ತಾನಾಗಿಯೇ 'ನ್'ಕಾರವಾಗುತ್ತದೆ.
ಅಣ್ಣನಾದವನು (ಬೆಳೆಯುವಾಗ) ತಮ್ಮನಿಗಿಂತ ಎತ್ತರವಾಗಿರುತ್ತಾನೆ. ಅಣ್ಣನು ಅವನ ತಮ್ಮನಿಗಶ್ಟೆ 'ಅಣ್ಣ', ಯಾಕಂದರೆ ತಮ್ಮನು ಯಾವಾಗಲೂ ಮೇಲೆ (ತಲೆ ಎತ್ತಿ) ನೋಡಬೇಕಾಗುತ್ತದೆ. ಇಲ್ಲೂ 'ಮೇಲೆ' ಎಂಬ ಹುರುಳಿಗೆ ನಂಟಿರುವುದನ್ನು ಗಮನಿಸಬಹುದು. ಬರೀ ಎತ್ತರದಲ್ಲಲ್ಲದೆ ಹಲವು ಬೇರೆ ವಿಶಯಗಳಲ್ಲೂ ಅಣ್ಣನು ತಮ್ಮನಿಗೆ 'ಮೇಲ್ಪಂಕ್ತಿ'ಯನ್ನು ತನಗೆ ಅರಿವಿಲ್ಲದೆಯೇ ಹಾಕಿಕೊಡುತ್ತಾನೆ.

Saturday, April 2, 2016
ಸುಂಟಿ/ಶುಂಟಿ ಪೆಪ್ಪರ‍್ಮೆಂಟ್
ಚಿಕ್ಕವರಿದ್ದಾಗ ಅಯ್ದು
ಪಯ್ಸೆಗೆ ಸಿಗುತ್ತಿದ್ದ ಸುಂಟಿ ಪೆಪ್ಪರ‍್ಮೆಂಟನ್ನು ನಾವೆಲ್ಲರೂ ತಿಂದಿರುತ್ತೇವೆ. ಆದರೆ ಅದರಲ್ಲಿ
’ಶುಂಟಿ’(ginger) ಇರುವುದಿಲ್ಲ ಬದಲಾಗಿ ಪುದೀನ(mint) ಇರುತ್ತದೆ. ಆದರೂ
ಅದಕ್ಕೆ ಸುಂಟಿ ಪೆಪ್ಪರ‍್ಮೆಂಟ್ ಎಂದು ಹೇಳುವುದು ಏತಕ್ಕೆ? ನೋಡೋಣ
ಯಾವುದೇ ತಿನಿಸನ್ನು ತಿನ್ನುವ
ಮೊದಲು ಅದು ನಮ್ಮ ಕಣ್ಣಿಗೆ ಬೀಳುತ್ತದೆ. ಎಶ್ಟೊ ವಸ್ತುಗಳಿಗೆ ಕೊಟ್ಟ ಹೆಸರುಗಳು ಅವುಗಳ ನಮ್ಮ ಕಣ್ಣಿಗೆ
ಹೇಗೆ ಕಾಣಿಸುತ್ತವೆ ಎಂಬುದರ ಮೇಲೆ ನಿಂತಿದೆ. ಯಾವುದೇ ತಿಂಡಿ-ತಿನಿಸನ್ನು ತಿನ್ನುವ ಮೊದಲು, ಅದು
ಯಾವ ಆಕಾರ ಇಲ್ಲವೆ ಬಣ್ಣ ಇಲ್ಲವೆ ಅದರ ಮತ್ಯಾವುದೋ ಗುಣದ ಮೇಲೆ ನಾವು ವಸ್ತುವನ್ನು ಗುರುತಿಸುತ್ತೇವೆ.
ಇಲ್ಲವೆ ಅದರ ಕಂಪಿನಿಂದ ಗುರುತಿಸುತ್ತೇವೆ.
ಹಾಗೆಯೇ, ಸುಂಟಿ
ಪೆಪ್ಪರ‍್ಮೆಂಟಿಗೆ ಆ ಹೆಸರು ಬಂದಿರಲು ಅದರ ಆಕಾರವೇ ಮುಕ್ಯ ಕಾರಣ ಎಂದು ಹೇಳಬಹುದು. ಯಾಕಂದರೆ
ಸುತ್ತುವ ಇಲ್ಲವೆ
ದುಂಡನೆ ಇಲ್ಲವೆ ತಿರುಗಿರುವ ಆಕಾರದ ಕಲ್ಪನೆಗೂ ಸುರುಟು/ಸುರುಂಟು ಎಂಬ ಪದಗಳಿಗೂ ನಂಟಿರುವುದನ್ನು
ಗುರುತಿಸಬಹುದು. ಇಲ್ಲಿ ಸುರುಂಟು ಎಂಬುದು ಎಸಕ ಪದವಾಗಿರುವುದರಿಂದ ಸುರುಂಟಿ ಎಂಬ ಪದವು
ಅದಕ್ಕೆ ಸಂಬಂದಿಸಿದ ಹೆಸರು ಪದವಾಗುತ್ತದೆ. ಅಂದರೆ ದುಂಡು ಮಾಡುವ ಕೆಲಸಕ್ಕೊ ಇಲ್ಲವೆ ಆ ಕೆಲಸ
ಯಾವುದರ ಮೇಲೆ ನಡೆದಿದೆ ಎಂಬುದನ್ನು ಸೂಚಿಸುವುದಕ್ಕೆ ಬಳಸಬಹುದು.
ಎತ್ತುಗೆಗೆ: ’ನಾಟು’
ಎಂಬ ಪದಕ್ಕೆ ’to plant’ ಎಂಬ ಹುರುಳಿದ್ದರೆ ’ನಾಟಿ’ ಎಂಬ ಪದಕ್ಕೆ ಎರಡು ಹುರುಳುಗಳಿವೆ.
ಒಂದು ’ನಾಟಿ’ ಮಾಡುವ ಕೆಲಸವಾದರೆ ಇನ್ನೊಂದು ನಾಟಿ ಮಾಡುತ್ತಿರುವ ಸಸಿ ಇಲ್ಲವೆ ಪಯಿರಿಗೂ ಹೊಂದುತ್ತದೆ.
ಅದೇ ತೆರನಾಗಿ ’ಸುರುಂಟಿ’ ಎಂಬುದು ದುಂಡಾಗಿರುವ ವಸ್ತುವನ್ನು ಸೂಚಿಸುತ್ತದೆ.
ಇದಲ್ಲದೆ ಕನ್ನಡದಲ್ಲಿ ಸುಟ್ಟರೆ suṭṭare a whirlwind [DED
-2715] ಎಂಬು ಹುರುಳಿದೆ. ಅಂದರೆ ತಿರುಗುತ್ತಾ ತಿರುಗುತ್ತಾ ಬರುತ್ತಿರುವ
ಗಾಳಿ. ಇದೇ ಪದದ ಇನ್ನು ಹಲವು ರೂಪಗಳಿವೆ – ಸುಣ್ಟರ, ಸುಣ್ಟ್ರು. ಇದರಲ್ಲೂ ’ಸುರುಂಟು’ ಪದದ ಹಾಗೆ ದುಂಡನೆ
ಇಲ್ಲವೆ ತಿರುಗುಗಿರುವ ಇಲ್ಲವೆ ಸುತ್ತುವ ಆಕಾರದ ಕಲ್ಪನೆಯನ್ನು ಗುರುತಿಸಬಹುದು. ಸುಣ್ಟರ ಎಂಬುದು ಸುರುಂಟಿ ಎಂಬುದರ ಇನ್ನೊಂದು ರೂಪವೆಂದು
ಇದರಿಂದ ತಿಳಿಯುತ್ತದೆ. ಈ ’ಸುಂಟಿ’ ಎಂಬ ಪದ, ಮಯ್ಸೂರಿನಲ್ಲಿ
ಇನ್ನೊಂದು ಸಂದರ್ಬದಲ್ಲಿ ಬಳಕೆಯಲ್ಲಿದೆ. ಅದೇ ಒಳಸುಂಟಿ, ಅಂದರೆ ಬೆರಳುಗಳಿಂದ ತೊಡೆಯ ಮೇಲೆ
ಗಿಂಡಿ ತಿರುವುವುದು. ’ಸುಂಟಿ’ ಎಂಬುದರ ಹಿಂದೆ ’ತಿರುವು’ವುದರ ಕಲ್ಪನೆಯಿದೆ ಎಂಬುದಕ್ಕ ಇದು ಮತ್ತೊಂದು
ನಿಂದರಿಕೆ.
Wednesday, March 9, 2016
ಮಕ್ಕಳು
’ಮಕ್ಕಳಿರಲವ್ವ ಮನೆ
ತುಂಬ’ ಎಂಬ ಗಾದೆಯನ್ನು ನಾವು ಕೇಳಿದ್ದೇವೆ. ಈ ಗಾದೆಯ ಹಿಂದೆ ಹಿರೀಕರು ಒಂದು ಗುಟ್ಟನ್ನು ಅಡಗಿಸಿಟ್ಟಿದ್ದಾರೆ. ಅಂದರೆ ಮಕ್ಕಳಿಲ್ಲದೆ ಯಾವುದೇ ಬಳಿ/ವಂಶ
ಮುಂದುವರೆಯುವುದಿಲ್ಲ. ಒಟ್ಟಂದದಲ್ಲಿ ಮನುಕುಲದ ಇರುವಿಕೆಯ ಮತ್ತು ಮುಂದುವರೆಯುವಿಕೆಯ ಕೇಳ್ವಿ ಬಂದಾಗ, ಈ ಗಾದೆ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಮಾರುಲಿಯನ್ನು
ಈಯುತ್ತದೆ.
’ಮಕ್ಕಳು’ ಎಂಬ ಪದದ
ಹಿನ್ನೆಲೆ ತಿಳಿದ ಮೇಲಂತೂ ಇದು ಇನ್ನು ಹೆಚ್ಚು ಮನವರಿಕೆಯಾಗುತ್ತದೆ. ಅದನ್ನು ಹೀಗೆ ಬಿಡಿಸಬಹುದು:-
ಮಱು+ಕಳ್ -> ಮರ‍್ಕಳ್ -> ಮಕ್ಕಳ್
’ಮಕ್ಕಳ್’ ಎಂಬ ಹಳಗನ್ನಡದ
ಪದವೇ ಹೊಸಗನ್ನಡದಲ್ಲಿ ’ಮಕ್ಕಳು’ ಎಂದಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹುದ್ದೇ.
ಮೇಲೆ ತೋರಿಸಿದಂತೆ
’ಮರು’ ಎಂಬ ಪರಿಚೆಪದವು,
’ಕಳ್’ ಎಂಬ ಹಲವೆಣಿಕೆಯನ್ನು ತೋರುವ ಒಟ್ಟಿನ ಜೊತೆ ಸೇರಿ ’ಮರ್ಕಳ್’ ಎಂಬ
ಪದವನ್ನು ಪಡೆಯಲಾಗಿದೆ. ಇದರ ಹುರುಳು ’ಮುಂದಿನ ಗಳು’ ಇಲ್ಲವೆ ’ಮುಂದಿನವು’ ಎಂದಾಗುತ್ತದೆ.
ಇದನ್ನು ಇನ್ನು ಬಿಡಿಸಿ ಹೇಳಬೇಕೆಂದರೆ ’ಮುಂದಿನ ತಲೆಮಾರು’ (Next Ones) ಎಂದಾಗುತ್ತದೆ. ಮಕ್ಕಳು ಯಾವಾಗಲು ಹೆತ್ತವರಿಗೆ ಮುಂದಿನ ತಲೆಮಾರೇ ಅಲ್ಲವೆ? ’ತಲೆಮಾರು’ ಎನ್ನುವ ಕೂಡುಪದದಲ್ಲಿಯೂ ’ಮಾರು’
(next) ಎಂಬ ಹೆಸರುಪದವನ್ನು ಕಾಣಬಹುದು. ಮಾರು ಎಂಬುದು ’ಮುಂದಿನ’ (next)
ಎಂಬ ಹುರುಳನ್ನೇ ಹೊಂದಿದೆ.
ಕನ್ನಡದಲ್ಲಿ ’ಮರ್ಕಳ್’ ಮತ್ತು ’ಮಕ್ಕಳ್’ ಎಂಬ ಎರಡೂ ಬಳಕೆಗಳನ್ನು
ಕಾಣಬಹುದು. ಕನ್ನಡದ ನುಡಿ ಹಿನ್ನಡವಳಿಯಲ್ಲಿ ’ರ್[ಮುಚ್ಚುಲಿ]’ ಎಂಬ ಪದಗಳಲ್ಲಿ ’ರ್’ ಕಾರ
ಬಿದ್ದುಹೋಗುವುದನ್ನು ನಾವು ಕಾಣುತ್ತೇವೆ. ಅಲ್ಲದೆ ’ರ್’ ಬಿದ್ದುಹೋಗುವಾಗ ಅದರ ಮುಂದೆ ಬರುವ
ಮುಚ್ಚುಲಿಯು ಇಮ್ಮಡಿಯಾಗುವುದನ್ನು ನಾವು ಕಾಣಬಹುದು.
ಸುರ್‍ಕು
|
ಸುಕ್ಕು
|
ಇರ್‍ಕು
|
ಇಕ್ಕು
|
ಅರ್‍ಗಳ
|
ಅಗ್ಗಳ
|
ಬೆರ್‍ಚು
|
ಬೆಚ್ಚು
|
ಮರ್‍ಚು
|
ಮಚ್ಚು
|
ಕರ್‍ತಲೆ
|
ಕತ್ತಲೆ
|
ಉರ್‍ದು
|
ಉದ್ದು
|
ಮರ್‍ದು
|
ಮದ್ದು
|
ಇನ್ನು ಮಗು(child) ಮತ್ತು ಕಳ್ ಸೇರಿ ಮಗುಕಳ್ -> ಮಕ್ಕಳ್ ಆಗಿರಬಹುದೆಂದು ಮಾತೆತ್ತಬಹುದು. ಆದರೆ ಆಗ ’ಮರ‍್ಕಳ್’ ಪದವನ್ನು ಬಿಡಿಸಲು ಬರುವುದಿಲ್ಲ. ಹಾಗಾಗಿ, ಈಗಾಗಲೆ ತಿಳಿಸರುವ ಬಿಡಿಸುವಿಕೆ ಹೆಚ್ಚು ಒಪ್ಪುತ್ತದೆ ಎಂದು ಹೇಳಬಹುದು.
Wednesday, June 24, 2015
ಉತ್ತರಹಳ್ಳಿ, ಉತ್ರಳ್ಳಿ
ಕನ್ನಡ ನಾಡಿನಲ್ಲಿ ಊರುಗಳ ಹೆಸರುಗಳಲ್ಲಿ ಕನ್ನಡದ್ದೇ ಆದ ಪದಗಳು ಹೇರಳವಾಗಿ ದೊರೆಯುತ್ತವೆ. ಆದರೆ ಅದರಲ್ಲಿ ಸಂಸ್ಕ್ರುತ ಪದಗಳನ್ನು ಹುಡುಕುವ ಇಲ್ಲವೆ ಬಗೆಯುವ ಕೆಟ್ಟ ಚಾಳಿಯೊಂದು ನಮ್ಮಲ್ಲಿ ಬೆಳೆದುಬಂದಿದೆ. ಅಂದರೆ ಅದು ಮೊದಲು ಸಂಸ್ಕ್ರುತ ಪದವೇ ಆಗಿದ್ದು, ಮಂದಿ ಬಾಯಲ್ಲಿ ’ಅಪಬ್ರಂಶ’ಗೊಂಡು ಕನ್ನಡ ಪದವಾಗಿದೆ ಎಂದು ಹೆಚ್ಚಿನೆಡೆ ಹೇಳಲಾಗುತ್ತದೆ. ಆದರೆ ಇದು ನಮಗೆ(ಕನ್ನಡಿಗರು) ನಾವೇ ಮಾಡಿಕೊಳ್ಳುತ್ತಿರುವ ಮೋಸವಲ್ಲದೇ ಮತ್ತೇನಲ್ಲ. ಅಲ್ಲದೆ ಊರುಗಳ ಹೆಸರುಗಳನ್ನು ಸಂಸ್ಕ್ರುತಕ್ಕೆ ತಳುಕು ಹಾಕುವುದರ ಹಿಂದೆ ಕಟ್ಟುಕತೆಗಳಿರುವುದರಿಂದ ಆ ಬಿಡಿಸುವಿಕೆಗಳಲ್ಲಿ ’ವಸ್ತುನಿಶ್ಟ’ವಾದ ಚಿಂತನೆ ಇರುವುದಿಲ್ಲ. ಅಲ್ಲದೆ ಹಲವೆಡೆ ಸಂಸ್ಕ್ರುತ ಪದಗಳ ಮೂಲಕ ಹೆಸರುಗಳನ್ನು ಬಿಡಿಸಲು ಹೋಗಿ ಎಡವಟ್ಟುಗಳಾಗುತ್ತವೆ. ಅಂತಹ ಒಂದು ಹೆಸರು ’ಉತ್ತರಹಳ್ಳಿ’.
ಉತ್ತರಹಳ್ಳಿ ಎಂಬ ಜೋಡುಪದವನ್ನು ’ಉತ್ತರ’(ಸಂಸ್ಕ್ರುತದಲ್ಲಿ North ಎಂಬ ಹುರುಳಿದೆ) ಮತ್ತು ’ಹಳ್ಳಿ( ಕನ್ನಡದಲ್ಲಿ 'village' ಎಂಬ ಹುರುಳಿದೆ) ಎಂದು ಬಿಡಿಸಲಾಗುತ್ತಿದೆ. ಆದರೆ ಉತ್ತರಹಳ್ಳಿ ಎಂಬ ಊರು ಬೆಂಗಳೂರಿನ ತೆಂಕಿಗೆ (ದಕ್ಶಿಣಕ್ಕೆ) ಇದೆ. ಆದ್ದರಿಂದ ಈ ಬಿಡಿಸುವಿಕೆ ಗೊಂದಲಕ್ಕೆಡೆ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ಈ ಗೊಂದಲ ಬಿಡಿಸುವುದಾದರೂ ಹೇಗೆ ಎಂದು ಉಂಕಿಸಿದಾಗ ಕನ್ನಡದ್ದೇ ಆದ ಪದ ’ಉಳು’ ಎಂಬ ಪದ ಹೊಳೆಯಿತು.
ಉಳು (<ಉೞ್) Ka. ur̤ (ur̤t, utt-) id.; ur̤asu, ur̤isu, ur̤usu to cause to plough [DED 688]
ಈ ಉಳು ಎಂಬುದರ ಇನ್ನೊಂದು ರೂಪ ಉತ್/ಉತ್ತು. ಇದು ಯಾವಾಗಲೂ ಹಿಂಬೊತ್ತಿನ ರೂಪವಾಗಿ ಕಾಣಿಸಿಕೊಳ್ಳುತ್ತದೆ
ಎತ್ತುಗೆಗೆ, ಉತ್ತು ಬಾಳುವವನ ಬಾಳು ಎತ್ತಲೂ ಲೇಸು ಎಂಬ ನಾಣ್ಣುಡಿ ಬಳಕೆಯಲ್ಲಿದೆ.
ಉಳುವವರು, ಉತ್ತುವರು ಎಂಬ ಹಲವಚನಗಳು ಬಳಕೆಯಲ್ಲಿದೆ.
ಎತ್ತುಗೆಗೆ: ಮೊದಲ ಬಾರಿಗೆ ಬೂಮಿ ಉತ್ತವರು ಇವರೇ
’ಉತ್ತವರು’ ಎಂಬ ಪದವೇ ಮಾತಿನಲ್ಲಿ ’ಉತ್ತೋರು’ ಎಂದು ಆಗಲು ಅನುವಿದೆ. ಎತ್ತುಗೆಗೆ, ಬಂದೋರು(<ಬಂದವರು), ಹೋದೋರು(<ಹೋದವರು) ಎಂಬ ಬಳಕೆಗಳು ನಮ್ಮ ಮುಂದಿದೆ. ಹಾಗಾಗಿ, ಉತ್ತೋರು ಎಂಬುದಕ್ಕೆ ’ಶಶ್ಟಿ ವಿಬಕ್ತಿ’ಯನ್ನು ಸೇರಿಸಿದರೆ, ಅಂದರೆ
ಉತ್ತೋರು +ಅ = ಉತ್ತೋರ (of farmers/tillers).
’ಉತ್ತೋರ’ ಎಂಬ ಪದಕ್ಕೆ ’ಹಳ್ಳಿ’ ಎಂಬ ಪದ ಸೇರಿದಾಗಿ ’ಉತ್ತೋರಹಳ್ಳಿ’ (A village of farmers/tillers) ಎಂದಾಗುವುದಕ್ಕೆ ಎಡೆಯಿದೆ.
ಉತ್ತೋರಹಳ್ಳಿ => ಉತ್ತರಹಳ್ಳಿ => ಉತ್ರಳ್ಳಿ
ಇದಲ್ಲದೆ, ಇನ್ನೊಂದು ಬಿಡಿಸಿಕೆಯನ್ನು ಇದಕ್ಕೆ ಕೊಡಬಹುದು. ನಾನು ಮೊದಮೊದಲು ಈ ಊರಿಗೆ ಬಂದಾಗ ನಾನು ಕಂಡಂತೆ ಇಲ್ಲಿ ಹೆಚ್ಚು ’ಉತ್ತರಣೆ’ ಗಿಡಗಳು ಕಂಡು ಬರುತ್ತಿತ್ತು. ಇದಕ್ಕೆ ಉತ್ತರೇಣಿ, ಉತ್ತರಾಣಿ ಎಂಬ ಇನ್ನು ಹಲವು ಹೆಸರುಗಳಿವೆ.
ಹಾಗಾಗಿ, ಇದು ಉತ್ತರಣೆಯ ಹಳ್ಳಿಯಾಗಿದ್ದಿರಲೂ ಬಹುದು.
ಉತ್ತರಣೆ+ಹಳ್ಳಿ = ಉತ್ತರಣೆಹಳ್ಳಿ => ಉತ್ತರಹಳ್ಳಿ => ಉತ್ರಳ್ಳಿ

Wednesday, July 23, 2014
ಮಾರು
ಚಾಮರಾಜನಗರದಲ್ಲಿ 'ಮಾರು' ಎಂಬ ಪದವನ್ನು 'ಗಿಡ-ಮರಗಳಿಗೆ ತಗುಲುವ ರೋಗ'(disease) ಎಂಬ ಹುರುಳಿನಲ್ಲಿ ಬಳಸುತ್ತಾರೆ.
ಬಳಕೆ:
೧. ಈ ಬಾಳೆಗಿಡಕ್ಕೆ ಮಾರು ಬಂದಿದೆ
೨. ಈ ಕರುಬೇವಿನ ಮರಕ್ಕೆ ಮಾರು ಬಂದಿದೆ
೩. ಈ ಕರುಬೇವಿನ ಎಲೆಗಳಲ್ಲಿ ಬಿಳಿ ಕಲೆ ಕಾಣಿಸಿಕೊಂಡಿರುವುದರಿಂದ ಇದಕ್ಕೆ ಮಾರು ತಗುಲಿದೆ ಎಂದು ಹೇಳಬಹುದು
ಮಾರು - DED 4834
Ka. māṟu to be opposite, be hostile, oppose ( verb)
state of being opposite or hostile (noun)
ಯಾವುದೇ ಗಿಡ-ಮರಕ್ಕೆ ರೋಗ ಎಂಬುದು ವಿರೋದಿಯಾಗಿ ಕಂಡುಬರುತ್ತದೆ. ರೋಗವು ಗಿಡ-ಮರಗಳ ಬೆಳವಣಿಗೆಗೆ ತಡೆ/ವಿರೋದ ಒಡ್ಡುತ್ತದೆ. ರೋಗದ ಹರಡಿಕೆ ಹೆಚ್ಚಾದರೆ ಗಿಡ-ಮರಗಳು ಸಾಯಲೂಬಹುದು.
ಆದ್ದರಿಂದ ಇಂತಹ ವಿರೋದಿ ಗುಣವನ್ನು ಹೊಂದಿರುವ 'ರೋಗ'ಕ್ಕೆ ಕನ್ನಡದಲ್ಲಿ ಹೀಗೆ 'ಮಾರು' ಎಂಬ ಪದ ಬಳಕೆ ಚಾ.ನಗರದ ಹಳ್ಳಿಗಳಲ್ಲಿ ಕಂಡುಬರುತ್ತದೆ. 'ಮಾರು' ಎಂಬುದು 'ವಿರೋದಿತನ'ಕ್ಕೆ ಸಾಟಿಯಾದ ಪದವಾಗಿದೆ.
ಮಾರು ಎಂಬುದಕ್ಕೆ ಇನ್ನೊಂದು ಹುರುಳೂ ಇದೆ.
Ka. change;
ಇದಲ್ಲದೆ ರೋಗ ತಗುಲಿದ ಗಿಡದಲ್ಲಿ ಕೆಲವು ಕಣ್ಣಿಗೆ ಕಾಣುವ ಬದಲಾವಣೆಗಳು ಕಂಡುಬರುತ್ತವೆ. ಅದರ ಮೇಲೆ ಕಲೆಗಳು ಬರುವುದು, ಬೆಳವಣಿಗೆ ಕುಂಟಿತವಾಗುವುದು. ಹೀಗೆ ರೋಗ ಬಂದಾಗ ಬದಲಾವಣೆಗಳು(changes) ಆಗುವುದರಿಂದ ರೋಗಕ್ಕೆ 'ಮಾರು' ಎಂಬ ಪದ ಬಳಕೆ ಬಂದಿರಬಹುದು

Thursday, June 5, 2014
ಮಾದಪ್ಪ
ಈ ಪದ ಕಂಡಾಗ ನೆನಪಿಗೆ ಬರುವುದು ಕೊಳ್ಳೇಗಾಲದ ಹತ್ತಿರ ಇರುವ ಮಲಯ್ ಮಾದಪ್ಪನ ಬೆಟ್ಟ. ಇದಲ್ಲದೆ ಮಾದಪ್ಪ, ಮಾದೇಶ, ಮಾದಯ್ಯ ಎಂಬ ಹೆಸರುಗಳು ನೆನಪಿಗೆ ಬರುತ್ತವೆ. ಹಾಗಾದರೆ ಮಾದಪ್ಪ ಎಂಬ ಪದದ ಹುಟ್ಟು ಹೇಗೆ ಬಂತು ಎಂದು ನೋಡಿದಾಗ ನಮಗೆ ಕೆಳಗಿನ ಪದಗಳು ಕಣ್ಣಿಗೆ ರಾಚುತ್ತವೆ.
ಮಾಣ್ Ka. māṇ to heal, be healed or cured. [DED -4804]
ಮಾಯ್ Ka. māy to be healed, cured. Go. (G. Mu. Ma.) māy- to be healed [DED-4815]
ಮಾಯ್ Ka. māy to be hidden, disappear, pass away; ಮಾಯಿಸು māyisu to cause to disappear; ಮಾಯ māya disappearance, vanishing; ಮಾಜು māju to cause to grow dim, cause to disappear, hide, conceal; n. hiding, dissimulation, deceit, fraud; ಮಾಂಜು māñju to conceal, suppress the truth; ಮಾಂಜಿಸು māñjisu to cause to grow dim or disappear [DED-4814]
ಮಾಣ್, ಮಾಯ್ ಎಂದರೆ ಬೇನೆ ಇಲ್ಲವೆ ಗಾಯ ವಾಸಿಯಾಗುವ ಇಲ್ಲವೆ ಗುಣವಾಗುವ ಕ್ರಿಯೆಯನ್ನು ಸೂಚಿಸುತ್ತದೆ. ಹಿಂದೆಲ್ಲ ಜನಪದರಲ್ಲಿ ಕೆಲವು ಮಟ್ಟಿಗೆ ಮದ್ದರಿಮೆ ಇದ್ದುದಾದರೂ ಕೆಲವೊಮ್ಮೆ ಕಯ್ ಮೀರಿ ಸಾವು-ನೋವುಗಳು ಆಗುತ್ತಿದ್ದವು. ಈಗ ನಮ್ಮ ಮುಂದಿರುವ ’ಮಲಯ್ ಮಾದಪ್ಪನ ಕಾವ್ಯ’ದಲ್ಲಿರುವಂತೆಯೇ ಮಾದಪ್ಪ, ಗುಡ್ಡಗಾಡಿನ ಮಂದಿಗೆ ಸೋಜಿಗವೆನಿಸುವಂತಹ ಕೆಲವು ಪವಾಡಗಳನ್ನು ಮಾಡಿದಾಗ ಇದರಿಂದ ಅವರ ಬದುಕಿನ ಕಶ್ಟ-ಕೋಟಲೆಗಳು ಬಗೆಹರಿದುದರಿಂದ ಕಶ್ಟ-ಕೋಟಲೆಗಳನ್ನು ಮಾಯಿಸಿದ ಅಂದರೆ ಕಾಣದಹಾಗೆ ಮಾಡಿದ ಇಲ್ಲವೆ ವಾಸಿ ಮಾಡಿದವನೇ ಮಾದಪ್ಪ ಎಂದು ನಂಬಿದ್ದರು.
ಪದದ ಬಿಡಿಸಿಕೆ ಹೀಗಿದೆ:-
ಮಾಯ್ - ಈ ಪದದ ಹಿಂಬೊತ್ತಿನ ರೂಪ ’ಮಾಯ್ದ’/ಮಾಣ್ದ ಆಗುತ್ತದೆ. ಇದಕ್ಕೆ ’ಅ’ ಎಂಬ ವ್ಯಕ್ತಿಸೂಚಕ ಒಟ್ಟನ್ನು ಸೇರಿಸಿದರೆ ಮಾಯ್ದ+ಅ =ಮಾಯ್ದ ಎಂಬ ಪದವೇ ಸಿಗುತ್ತದೆ. ಇದೇ ಸವೆತದಿಂದಾಗಿ ’ಮಾದ’ ಎಂದು ಮಾರ‍್ಪಾಟಾಗಿದೆ. ಇಂತಹ ವಾಸಿ ಮಾಡುವಂತಹ ಇಲ್ಲವೆ ಗುಣಮಾಡುವಂತಹ ಅಳವನ್ನು ಹೊಂದಿರುವ ’ಅಪ್ಪ’ನೇ ಮುಂದೆ ’ಮಾದಪ್ಪ’ನಾದ. ಇಲ್ಲಿ ’ಅಪ್ಪ’ ಎಂಬುದು ಅಳವು ಸೂಚಕ ಪದವಾಗಿದೆ. ಇದಲ್ಲದೆ ಈ ಜನಪದ ಹಾಡಿನಲ್ಲಿ ಮಾದಪ್ಪ ಎಂಬ ಪದದಲ್ಲಿರುವ ’ಮಾಯ್’ ಎಂಬ ಬೇರುಪದ ತಿಳಿಯಾಗಿ ಕಾಣಿಸುತ್ತದೆ.
ಚೆಲ್ಲಿದರೂ ಮಲ್ಲಿಗೆಯ ಬಾನ ಸೂರೇರಿ ಮ್ಯಾಗೆ
ಅಂದಾದ ಚೆಂದಾದ ಮಾಯ್-ಕಾರ ಮಾದೇವ್ಗೆ
ಚೆಲ್ಲಿದರೂ ಮಲ್ಲಿಗೆಯ
ಈ ಪದವನ್ನು ಇನ್ನೊಂದು ಬೇರುಪದದ ಮೂಲಕ ಕೊಂಚ ಬೇರೆಯಾದ ಹುರುಳಿನೊಂದಿಗೆ ಬಿಡಿಸಬಹುದು.
ಮಾ Ka. mā great, in: ಮಾ-ಗೆಲಸ mā-gelasa great work, ಮಾ-ಮಾಯಿ mā-māyi great mother [DED-4786]
ಮಾ+ ಹಯ್ದ = ಮಾಹಯ್ದ= ಮಾದ , ಮಹಾಮಾನವ (The great man) ಎಂಬ ಬಿರುದುಗಳು/ಹುರುಳು ಮೇಲೆ ಹೇಳಿದ ಎಲ್ಲ ಕಾರಣಗಳಿಂದ ಮಾದಪ್ಪನಿಗೆ ಹೊಂದುತ್ತದೆ.
Tuesday, April 8, 2014
ಕುರಿಕೆ, ಕುರ‍್ಕೆ, ಕುಕ್ಕೆ
ಪಾಲ್ಕುರಿಕೆ, ಕುಕ್ಕೆ ಸುಬ್ರಮಣ್ಯ, ಮೇಟಿಕುರ‍್ಕೆ ಎಂಬ ಊರಿನ
ಹೆಸರುಗಳನ್ನು ಗಮನಿಸಬಹುದು. ಇವುಗಳಲ್ಲಿರುವ ಪದ ’ಕುರಿಕೆ’ ಎಂಬುದು ತಿಳಿಯಾಗಿ ಕಾಣುತ್ತದೆ.
ಕುರಿಕೆ ಎಂಬುದಕ್ಕೆ ’ಹಳ್ಳಿ’ ಎಂಬ ಹುರುಳನ್ನು ಕೊಡಲಾಗಿದೆ
ಕುರಿಕೆ(<ಕುಱಿಕೆ) Ka. kuṟike village. [DED
1844]
ಇಲ್ಲಿ ಪಾಲ್ಕುರಿಕೆ ಎಂದರೆ
ಹಾಲುಹಳ್ಳಿ, ಮೇಟಿಕುರಿಕೆ(ಮೇಟಿಕುರ‍್ಕೆ) ಎಂದರೆ ರಯ್ತರಹಳ್ಳಿ ಎಂತಲೂ ಹುರುಳು ಬರುತ್ತದೆ.
ಕುರುಬ, ಕುರುಂಬ Ka. kuṟuba man of the shepherd caste; kuṟumba a caste of mountaineers [DED
1844]
ಕುರುಬ, ಕುರುಂಬ ಮತ್ತು ಕುರಿಕೆ ಎಂಬ ಎರಡೂ
ಪದಗಳು ಒಂದೇ ಬೇರುಪದದಿಂದ ಬಂದಿದೆ ಎಂದು ದ್ರಾವಿಡಿಯನ್ ಪದನೆರಕೆಯಲ್ಲಿ ಕೊಡಲಾಗಿದೆ. ಆದ್ದರಿಂದ
ಕುರುಬರು(ಕುರಿ ಸಾಕುವವರು) ಇಲ್ಲವೆ ಕುರುಂಬರು(ಬೆಟ್ಟದಲ್ಲಿ ವಾಸಿಸುವವರು) ಹೆಚ್ಚಾಗಿ ವಾಸಿಸುವ ಊರಿಗೆ ಕುರಿಕೆ
ಎಂಬ ಪದದ ಬಳಕೆ ಬಂದಿರಬಹುದು. ಪಾಲ್ಕುರಿಕೆ ಎಂಬುವಲ್ಲಿ ’ಹಾಲು’ ಎಂಬ ಪದವಿದೆ. ಹಾಲಿಗೂ, ಕುರುಬರಿಗೂ
ಬಿಡಿಸಲಾರದ ನಂಟಿದೆ. ಇನ್ನು ಕುಕ್ಕೆ ಸುಬ್ರಮಣ್ಯ ಹಳ್ಳಿಯು ಬೆಟ್ಟದ ಕಣಿವೆಯಲ್ಲಿರುವ ಒಂದು ಊರು.
ಕುರ‍್ಕೆ ಎಂಬ ಪದ ’ಕುಕ್ಕೆ’ ಆಗುವುದಕ್ಕೆ ಹೊಸಗನ್ನಡದಲ್ಲಿ ಅನುವಿದೆ ಯಾಕಂದರೆ ಹೊಸಗನ್ನಡದಲ್ಲಿ ’ರ್’ ಕಾರದ ಮುಂದೆ ಕ,ಚ,ಟ,ತ,ಪ ದಂತಹ ಮುಚ್ಚುಲಿಗಳು ಬಂದಾಗ ’ರ್’ ಕಾರ ಬಿದ್ದುಹೋಗಿ ಮುಚ್ಚುಲಿ ಇಮ್ಮಡಿಯಾಗುತ್ತದೆ. ಎತ್ತುಗೆಗೆ:-
ಸುರ‍್ಕು -> ಸುಕ್ಕು
ಉರ‍್ಚು -> ಉಚ್ಚು
ಕರ‍್ತಲೆ -> ಕತ್ತಲೆ
ಇರ‍್ಪ -> ಇಪ್ಪ
ತೇಟ್
ಆಡುನುಡಿಯಲ್ಲಿರುವ ಬಳಕೆ:-
೧. ಅವ್ನ್ ನೋಡು, ತೇಟ್ ಅವರ ಅಪ್ಪನ್ ತರಾನೆ ಅವ್ನೆ
೨. ಇವರೇನು ಅವಳಿ-ಜವಳಿನಾ? ತೇಟ್ ಒಂದೇ ತರ ಅವ್ರೆ
ಇದರಲ್ಲಿ ತೇಟ್ ಎಂಬುದಕ್ಕೆ clearly/certainly
ಎಂಬ ಹುರುಳುಗಳಿವೆ. ಇಂತಹ ಹುರುಳಿರುವ ಪದಗಳನ್ನು ಪದನೆರಕೆಯಲ್ಲಿ ಹುಡುಕಿದಾಗ
ತೇಟ, ತೇಟೆ Ka. tēṭa, tēṭe clearness, purity (as that of water, etc.); [DED
3471]
ಇದರ ತಮಿಳಿನಲ್ಲಿರುವ ಸಾಟಿ ಪದಗಳು
ತೇಱ್ಱಮ್(ತೇಟ್ರಮ್) Ta. tēṟṟam certainty,
assurance, determination, clearness [DED
3471]
ಯಾವುದೇ ವಿಶಯವನ್ನು ಒತ್ತಿ ಇಲ್ಲವೆ ನಿಕ್ಕಿಯಾಗಿ ಹೇಳಬೇಕಾದರೆ
’ತೇಟ್’ ಪದದ ಬಳಕೆಯು ಕಂಡು ಬರುತ್ತದೆ.
Friday, April 4, 2014
ತೊತ್ತು, ದುಡಿ
ತೊತ್ತು ಮತ್ತು ದುಡಿ ಎಂಬ ಬಳಕೆಗಳು ಸಾಮಾನ್ಯವಾಗಿವೆ.
೧. "ಸಲೆಯಾಳಿಗೊಂಬವರ ತೊತ್ತಿನ ಮಗ" - ಬಸವಣ್ಣನ ವಚನ
೨. ದುಡಿಯುವವರಿಗೆ ಕೂಲಿಯನ್ನು ಕೊಡಬೇಕು
ತೊತ್ತು ಎಂಬ ಪದವೇ ತುೞಿಲ್, ತೊೞ್ತು ಎಂಬ ಹಳಗನ್ನಡದ ಪದಗಳಿಂದ ಬಂದಿದೆ.
ತುೞಿಲ್ Ka. tur̤il work, servitude, slavery; tor̤tu, tottu (a male, but esp. also a female) servant, a strumpet. [DED 3524]
ದುಡಿ ಎಂಬ ಪದದ ಹುರುಳು ಹೀಗಿದೆ
ದುಡಿ - Ka. duḍi to labour, acquire by one's labour or efforts; duḍita acquisition, gain; duḍime acquiring, requisition, gain [DED 3295] Cf. 3524
ದ್ರಾವಿಡಿಯನ್ ಪದನೆರಕೆಯಲ್ಲಿ ಈ ಎರಡು ಪದಗಳಿಗೆ ನಂಟನ್ನು ಕಲ್ಪಿಸಲಾಗಿದೆ. ಇದು ಎರಡು ಪದಗಳ ಹುರುಳಿಗೆ ಇರುವ ಹೋಲಿಕೆಯನ್ನು ತೋರಿಸುತ್ತದೆ. ದುಡಿತ ಮಾಡದೆ ತೊತ್ತು(ದಾಸ) ಆಗಲಾಗದು. ದುಡಿತವಿಲ್ಲದೆ ಕೆಲಸ(ತುೞಿಲ್) ಮಾಡಲಾಗದು.
ಇನ್ನು ಉಲಿಯರಿಮೆಯ ಕಣ್ಣಿನಿಂದ ಈ ಪದಗಳನ್ನು ನೋಡಿದಾಗ ಇವುಗಳಿಗಿರುವ ಹತ್ತಿರವನ್ನು ಅರಿತುಕೊಳ್ಳಬಹುದು.
ತುೞಿ(ಲ್) ==> ದುಡಿ
ತು=>ದು ’ತ’ ಎಂಬ ಕೊರಲಿಸದ ಉಲಿಯು ’ದ’ ಎಂಬ ಕೊರಲಿಸಿದ ಉಲಿಯಾಗಿ ಮಾರ‍್ಪಾಟಾಗಿರುವುದು
ೞಿ=>ಡಿ ಇನ್ನು ಕನ್ನಡ ನುಡಿಯ ಹಿನ್ನಡವಳಿಯಲ್ಲಿ "ೞ್’ ಕಾರವು ’ಡ/ಣ’ ಕಾರವಾಗಿರುವುದಕ್ಕೆ ಹಲವು ಎತ್ತುಗೆಗಳು ಇಲ್ಲಿ ಸಿಗುತ್ತವೆ
Friday, January 3, 2014
ಮುಳ್ಳು-ಮೊಳೆ
ಮುಳ್ಳು ಪದದ ಕೆಲವು ಬಳಕೆಗಳು :-
೧. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
೨. ಇದು ಮಗ್ಗುಲ ಮುಳ್ಳಾಗಿ ಕಾಡುತ್ತಿದೆ
೩. ಮುಳ್ಳೇ ಇಲ್ಲದ ಗುಲಾಬಿ ಹೂವಿಲ್ಲ
೪. ಈ ಗಡಿಯಾರದಲ್ಲಿ ದೊಡ್ಡ ಮುಳ್ಳು ಮುರಿದದೆ
೫. ಈ ತಕ್ಕಡಿ ಮುಳ್ಳು ಆ ಕಡೆಗೆ ವಾಲಿದೆ
೬. ಅವರು ಮುಳ್ಳುಚಮಚದಲ್ಲಿ ಹಣ್ಣನ್ನು ತೆಗೆದುಕೊಂಡು ತಿನ್ನುತ್ತಾರೆ
ಮುಳ್ಳು ಎಂಬ ಪದಕ್ಕೆ ಹಲವು ರೂಪಗಳು ಮತ್ತು ಹುರುಳುಗಳಿವೆ
ಮುಳ್, ಮುಳು, ಮುಳ್ಳು Ka. muḷ, muḷu, muḷḷu thorn, pointed thing as a prickle, a sting, spur, hand of a clock, tongue of a balance, etc.; vb. to prick, sting; muḷuhu pricking, stinging, goading, goad; muḷḷa hand of a clock; muḷḷu fork [DED 4995]
DED ಅಲ್ಲಿ ಇದನ್ನು ಇನ್ನೊಂದು ಬೇರುಪದಕ್ಕೆ ಕೊಂಡಿಸಲಾಗಿದೆ. Cf. 4998
ಮೊಳೆ Ka. moḷe pin, nail, spike, wedge, peg, stake, pointed object.[DED 4998]
ಮೊಳೆ ಪದದ ಬಳಕೆಗಳು
೧. ಈ ಗೋಡೆಗೆ ಮೊಳೆ ಹೊಡೆದಿದ್ದಾರೆ
೨. ಇಲ್ಲಿ ಶಾಮಿಯಾನ ಹಾಕಲು ದೊಡ್ಡ ದೊಡ್ಡ ಮೊಳೆಗಳನ್ನು ನಾಟಲಾಗಿದೆ
ಇವೆರಡೂ ಬೇರುಪದಗಳ ಹುರುಳಾದ ಚೂಪುತನದ ಮೇಲೆಯೇ ಇವನ್ನು ಕೊಂಡಿಸಲಾಗಿದೆ. ಆದರೆ ಮುಳ್ಳು(thorn) ಎಂಬುದು ತಾನಾಗಿಯೇ ಸುತ್ತಣದಲ್ಲಿ ದೊರೆಯುವುದು ಆದರೆ ಮೊಳೆ(nail) ಎಂಬುದು ಮಾನವನಿಂದ ಉಂಟಾದ ವಸ್ತು. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಮುಳ್ಳಿನಿಂದಲೇ ಮೊಳೆ ಎಂಬ ಪದದ ಹುಟ್ಟಿರಬಹುದೆಂದು ಹೇಳಬಹುದಾಗಿದೆ.

Tuesday, February 26, 2013
ಅಣ್ಣಮ್ಮ
ಬೆಂಗಳೂರಿನ ಊರದೇವತೆ ಅಣ್ಣಮ್ಮ. ಆದರೆ ಅಣ್ಣಮ್ಮ ಅಂತ ಹೆಸರು ಏಕೆ ಬಂತು ಅಂತ ಯಾರನ್ನೂ ಕೇಳಿದರೂ ನಿಮಗೆ ಉತ್ತರ ದೊರೆಯುವುದಿಲ್ಲ. ಕೆಲವರು ಇದೇನು ಅಣ್ಣ(brother)+ಅಮ್ಮ ವಿಚಿತ್ರವಾಗಿದಿಯೆಲ್ಲ ಈ ಹೆಸರು ಎಂದು ಹೇಳುವುದುಂಟು. ಇದು ಅರಿವಿನ ಕೊರತೆಯಶ್ಟೆ ಎಂದು ಹೇಳಬಹುದು.
’ಅಣ್ಣಮ್ಮ’ ಎಂಬುದು ಅಣ್ಣೆಗನ್ನಡ ಪದ. ಒಹ್! ಅಣ್ಣಮ್ಮ ಪದದ ಒಳಗುಟ್ಟು ಇಲ್ಲೇ ಇದೆ.
ಅಣ್ಣೆ, ಅಣ್ಣ, ಅಣ Ka. aṇṇe, aṇṇa, aṇa excellence, purity; aṇṇālige uvula [DED 110]
ಅಣ್ಣ/ಅಣ್ಣೆ ಎಂಬುದಕ್ಕೆ ಮೇಲ್ಮೆ, ಮೇಟಿ, ಸೊಗಸು ಎಂಬ ಹುರುಳುಗಳಿವೆ. ಯಾವಾಗಲೂ ದೇವರು ಎಂಬುದು ದೊಡ್ಡ ಶಕ್ತಿ ಎಂಬ ಅನಿಸಿಕೆ ಮಂದಿಯ ಬಗೆಯಲ್ಲಿ ಬೇರೂರಿದೆ. ಅದ್ದರಿಂದ ಅಣ್ಣ+ಅಮ್ಮ => ಅಣ್ಣಮ್ಮ ಎಂಬ ಹೆಸರು ಬಂದಿದೆ.
ಮೇಲೆ ಕೊಟ್ಟಿರುವಂತೆ ’ಅಣ್ಣ’ ಎಂಬುದಕ್ಕೆ ’purity'(ಶುದ್ದ, ಸ್ವಚ್ಚ) ಎಂಬ ಹುರುಳಿದೆ. ದೇವರಿಗೆ ಎಲ್ಲ ಒಳ್ಳೆ ಗುಣಗಳನ್ನು ಹೊಂದಿಸುವಲ್ಲಿ ನಮ್ಮ ಮಂದಿ ನೆಮ್ಮದಿಯನ್ನು ಕಾಣುತ್ತಾರೆ. ಆದ್ದರಿಂದ ’ಅಣ್ಣಮ್ಮ’ಎಂಬ ಪದ ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ.
ಮೇಳೆ ತಿಳಿಸಿದ ಗುಣಗಳನ್ನು ಅಣ್ಣಮ್ಮ ಎಂಬ ಪದ ಒಳಗೊಂಡಿರುವುದರಿಂದಲೇ ಅಣ್ಣಮ್ಮ ಬೆಂಗಳೂರಿನ ’ಊರದೇವತೆ’ಯಾಗಿರುವುದೆಂದು ತೋರುತ್ತದೆ.

Monday, January 28, 2013
ಹೀಗೆ, ಹಾಗೆ, ಹೇಗೆ
ಈ ಮೇಲಿನ ಪದಗಳನ್ನು ನಮ್ಮ ದಿನಬಳಕೆಯಲ್ಲಿ ಹೆಚ್ಚಾಗಿ ಕಾಣಬಹುದು
೧. ಅವರು ಹಾಗೆ ಮಾಡಿದುದರಿಂದ ಇವರು ಹೀಗೆ ಮಾಡಿದರು
೨. ಈ ಕೆಲಸವನ್ನು ಮಾಡುವುದು ಹೇಗೆ?
ಇದಲ್ಲದೆ ಇನ್ನಿತರ ಬಳಕೆಗಳಿವೆ:-
ಹೀಗೆ = ಹಿಂಗೆ, ಇಂಗೆ(ತೆಂಕುನುಡಿ), ಹೀಂಗ (ಬಡಗು ನುಡಿ)
ಹಾಗೆ = ಹಂಗೆ, ಅಂಗೆ(ತೆಂಕುನುಡಿ), ಹಾಂಗ(ಬಡಗು ನುಡಿ)
ಹೇಗೆ = ಹೆಂಗೆ, ಎಂಗೆ(ತೆಂಕುನುಡಿ), ಹ್ಯಾಂಗ(ಬಡಗು ನುಡಿ), ಹ್ಯಾಗೆ,
ihage, ihaṅge, ihige, hīge, hīṅge in this manner, thus [DED 410]
ahage, ahaṅge, hāge, hāṅge in that manner, thus [DED 1]
ehage, ehaṅge, eheṅge, eṅge, heṅge, hēge, hēṅge, hyāge hyāṅge in what manner [DED 5151]
ಹಾಗಾದರೆ ಹೀಗೆ, ಹಾಗೆ, ಹೇಗೆ -ಇವುಗಳ ಒಳಗುಟ್ಟೇನು ಎಂಬುದನ್ನು ನೋಡೋಣ.
ಬಿಡಿಸಿಕೆ ೧:
ಇ + ಹಗೆ = ಇಹಗೆ =ಇ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಈ+ಗೆ => ಹೀಗೆ
ಅ + ಹಗೆ = ಅಹಗೆ =ಅ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಆ+ಗೆ => ಹಾಗೆ
ಎ + ಹಗೆ = ಎಹಗೆ =ಎ+ಹ್+ಅ+ಗೆ ===ಉಲಿಕದಲಿಕೆಯಾದ ಮೇಲೆ===> ಹ್+ಏ+ಗೆ => ಹೇಗೆ
ಇಲ್ಲಿ ಮೊದಲಲ್ಲಿರುವ ಇ,ಅ,ಎ ಎಂಬಿವುಗಳು ಉದ್ದ ತೆರೆಯುಲಿಗಳಾಗಿ ಈ, ಆ, ಏ ಆಗಿ ಮಾರ್ಪಾಟಾಗಿವೆ.
ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ
ಹಾಗಾಗಿ ಇ ಎಂಬುದು ಉಲಿಕದಲಿಕೆಯಾದಾಗ ’ಈ’ ಆಗುತ್ತದೆ
ಅ ಎಂಬುದು ಉಲಿಕದಲಿಕೆಯಾದಾಗ ’ಆ’ ಆಗುತ್ತದೆ
ಎ ಎಂಬುದು ಉಲಿಕದಲಿಕೆಯಾದಾಗ ’ಏ’ ಆಗುತ್ತದೆ
ಇನ್ನು ’ಹಗೆ’(ಪು ೧೬೨೦) ಎಂಬುದಕ್ಕೆ ಕಿಟ್ಟೆಲ್ ರವರು ತಮ್ಮ ಪದನೆರಕೆಯಲ್ಲಿ Manner , Mode ಎಂಬ ಹುರುಳುಗಳನ್ನು ಕೊಟ್ಟಿದ್ದಾರೆ.
ಆದರೆ ಆಡುಮಾತಿನಲ್ಲಿರುವ ಇಂಗೆ, ಅಂಗೆ, ಎಂಗೆ ಎಂಬುವಲ್ಲಿ ಬರುವ ’ಮೂಗುಲಿ’ಯು ’ಹಗೆ’ ಎಂಬ ಪದದ ಬಗ್ಗೆ ಇನ್ನು ಉಂಕಿಸಲು ಒತ್ತಾಯ ಮಾಡುತ್ತದೆ.
ಪಾಂಗು Ka. pāṅgu manner, form, shape [DED 4053]
ಹಗೆ ಮತ್ತು ಬಗೆ (ಕಿಟ್ಟೆಲ್, ಪುಟ೧೦೬೩, a manner, a mode) ಇವುಗಳಿಗೆ ’ಪಾಂಗು’ ಎಂಬುದೇ ಬೇರು ಪದವಾಗಿರುವಂತೆ ತೋರುತ್ತದೆ.
ಪಾಂಗು => ಪಗೆ => ಹಗೆ
ಪಾಂಗು => ಪಗೆ => ಬಗೆ
ನೋಡಿ, ಮೊದಮೊದಲು ’ಪಾಂಗು’ ಎಂಬುದು ಗೊತ್ತಿಲ್ಲದ/ಬಳಕೆಯಿಲ್ಲದ ಪದವಾಗಿ ಕಂಡರೂ ಅದನ್ನು ನಮಗರಿವಿಲ್ಲದಂತೆ ದಿನಾಲೂ ಬಳಸುತ್ತಿದ್ದೇವೆ.
ಈ ಪದದ ಗುಟ್ಟಿನ ಬಗ್ಗೆ ಸುಳುಹುಗಳನ್ನು ಕೊಟ್ಟ ಗೆಳೆಯ ಸಂದೀಪ್ ಕಂಬಿಯವರಿಗೆ ನನ್ನಿ

Saturday, January 19, 2013
ತಬ್ಬಲಿ
ಬಳಕೆ:
೧. ಆ ಹುಡುಗನನ್ನು ತಬ್ಬಲಿ ಮಾಡಬೇಡಿ
೨. ಅವನು ತಾಯಿ ಇಲ್ಲದ ತಬ್ಬಲಿ ಎಂದು ಇವರೇ ಅವನನ್ನು ಸಾಕಿದರು
ಬಿಡಿಸಿಕೆ:
ತಬ್ಬು + ಇಲಿ = ತಬ್ಬಿಲಿ => ತಬ್ಬಲಿ
ತರ್ಬು, ತಬ್ಬು tarbu, tabbu to embrace ; n. an embrace [DED 3116]
ಇಲ್ಲ, ಇಲ ila a man who has not [DED 2559]
ಇಲಿ one who has not
ಅಂದರೆ ಯಾವ ಮನುಶ್ಯನಿಗೆ/ಮಗುವಿಗೆ ತಬ್ಬಿ ಮುದ್ದಾಡುವ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಇವರು ಯಾರೂ ಇರುವುದಿಲ್ಲವೊ ಅವರನ್ನು ತಬ್ಬಲಿ ಎನ್ನಬಹುದಾಗಿದೆ.

Sunday, January 13, 2013
ಉಕ್ಕಡ
ಬಳಕೆಗಳು
೧. ಮಯ್ಸೂರಿನಲ್ಲಿ ಎಲೆ ಉಕ್ಕಡ ಇದೆ; ಇದು ಆಗ ಊರಿನ ಆಚೆಯಲ್ಲಿತ್ತು
ಉಕ್ಕಡಮನೆ - ಊರಾಚೆಯ ಮನೆ
ಉಕ್ಕಡಹೊಲ - ಊರಾಚೆಯ ಹೊಲ
ಬಿಡಿಸಿಕೆ:-
ಉರು(<ಉಱು,ಊರ್)+ ಕಡೆ = ಉರ್ಕಡೆ = ಉಕ್ಕಡೆ => ಉಕ್ಕಡ
ಅಂದರೆ ಊರಿನ (ಹಳ್ಳಿ, ಪಟ್ಟಣ ಆಗಿರಬಹುದು) ಕಡೆಯಲ್ಲಿರುವ/ಆಚೆಯಲ್ಲಿರುವ ಜಾಗವೇ ’ಉಕ್ಕಡ’. ಈ ಜಾಗದಲ್ಲಿ ಮನೆ, ಹೊಲ ಇಲ್ಲವೆ ಕಾವಲು(guard/watch) ಕೂಡ ಇರಬಹುದಾಗಿತ್ತು.
Ka. ukkaḍa entrenchment about a camp, advanced guard, watch, guardhouse, end or outermost post of a town or village [DED 565]
Ka. ūr village, town [DED 752]
Ka. uṟu (urt-, utt-) to be, stay [DED 710]

ಆರಂಬ
’ಆರಂಬ’ ಎಂಬ ಪದ ಹಳೆ ಮಯ್ಸೂರಿನ ಕಡೆ ಬಳಕೆಯಲ್ಲಿದೆ
೧. ನಾವು ಆರಂಬ ಮಾಡಿ ಬದುಕನ್ನು ಸಾಗಿಸುತ್ತೇವೆ
೨. ಇವರ ಇಬ್ಬರು ಮಕ್ಕಳಲ್ಲಿ ಇವನೇ ಆರಂಬಕಾರ
ಆರಮ್ಬ(ಆರಂಬ) ಎಂಬ ಪದಕ್ಕೆ ಕಿಟ್ಟೆಲ್ ಪದನೆರಕೆಯಲ್ಲಿ ಪುಟ ೧೬೩ರಲ್ಲಿ Tilling, Cultivation ಎಂಬ ಹರುಳನ್ನು ಕೊಡಲಾಗಿದೆ.
ಇದಲ್ಲದೆ ಕಾಡಾರಂಬ (Dry Cultivation) , ನೀರಾರಂಬ (Wet Cutltivation) ಮತ್ತು ಆರಂಬಕಾರ(cultivator, farmer) ಎಂಬ ಪದಬಳಕೆಗಳೂ ಇವೆ.
ಬಿಡಿಸಿಕೆ:-
ಆರ್+ಮ್ಬು
ಇಲ್ಲಿ,
ಆರ್, ಏರ್ ಎಂಬುದಕ್ಕೆ ಈ ಹುರುಳಿದೆ Ka. ēru, ār pair of oxen yoked to a plough.[DED 2815] ಅಂದರೆ ನೇಗಿಲಿಗೆ ಹೊಂದಿಸಿ ಉಳುಮೆಗೆ ಅಣಿಯಾದ ಜೊತೆ ಎತ್ತುಗಳು ಎಂಬ ಹುರುಳಿದೆ.
ಮ್ಬು ಎಂಬ ಒಟ್ಟು ಈ ಹೆಸರು ಪದಗಳಲ್ಲಿರುವುದನ್ನು ಗಮನಿಸಬಹುದು
ತೆಮ್ಬು (ತೆನ್)
ಇಮ್ಬು (ಇರು)
ಕೊಮ್ಬು (ಕೊ)
ಚೆಂಬು (ಚೆನ್)

ಅಂಕೆ
ಅಂಕೆ ಎಂಬುದರ ಬಳಕೆಗಳು ಹೀಗಿವೆ.
೧. ಅವನನ್ನು ಅಂಕೆಯಲ್ಲಿಟ್ಟುಕೊಳ್ಳದಿದ್ದರೆ ನಿನಗೆ ಮುಂದೆ ತೊಂದರೆಯಾಗುತ್ತದೆ.
೨. ಬೆಂಗಳೂರಿನಲ್ಲಿ ಅಂಕೆ ತಪ್ಪಿರುವ ಪ್ಲಾಸ್ಟಿಕ್ ಬಳಕೆ
೩. ಈ ಮಾವುತ ಆನೆಯನ್ನು ಅಂಕೆಯೊಳಗೆ ಇಟ್ಟುಕೊಂಡಿದ್ದಾನೆ
ಕಿಟ್ಟೆಲ್ ಅವರು ತಮ್ಮ ಪದನೆರಕೆಯಲ್ಲಿ ಇದು ’ಅಡಕು’ ಎಂಬ ಪದದಿಂದ ಬಂದಿರಬಹುದೆಂಬ ಅನುಮಾನವನ್ನು ಮುಂದಿಟ್ಟಿದ್ದಾರೆ. ಆ ಆನುಮಾನವನ್ನೇ ಬೆನ್ನತ್ತಿದಾಗ
ಆಪು , ಅಂಕೆ Ka. āpu restraint, stoppage; aṅke an order, command, control, restraint; [DED 340]
ಅಡಕು aḍaku to press, press into narrower compass, pack, subdue, control [DED 63]
ಅಡಚು aḍacu to press down, pack, stuff in, be humble, silence, shut as the mouth; [DED 63]
ಅಡಕ aḍaka pressing into narrow compass, contracting, shrinking, hiding oneself, hiding place, being comprehended or contained in, abridgement; [DED 63]
ಅಕ್ಕು akku to subdue, bring under control[DED 63]
ಮೇಲಿನ ಪದಗಳನ್ನು ಗಮನಿಸಿದಾಗ ಅಡಕು ಎಂಬುದು ’ಸೀಮಿತಗೊಳಿಸು’/ಅದುಮು ಎಂಬ ಹುರುಳನ್ನು ಕೊಡುತ್ತದೆ ಎಂಬುದನ್ನು ತಿಳಿಯಬಹುದು.
ಹಾಗೆ, ಅದೇ ಪದಬೇರಿನಲ್ಲಿ ಈ ಪದಗಳನ್ನೂ ಕೊಡಲಾಗಿದೆ
ಅಡಂಗು, ಅಡಗು Ka. aḍaṅgu, aḍagu to hide, be concealed [DED 63]
ಯಾವುದೇ ವಸ್ತುವನ್ನು ಇಲ್ಲವೆ ವ್ಯಕ್ತಿಯನ್ನು ’ಅಂಕೆ’ಗೆ ತೆಗೆದುಕೊಳ್ಳುವುದು ಅಂದರೆ ಅದನ್ನು ’ಸೀಮಿತ’ಗೊಳಿಸುವುದು ಇಲ್ಲವೆ ಅಡಗಿಸುವುದೇ ಆಗಿದೆ. ಹಾಗಾಗಿ
ಅಡಂಗು <=>ಅಂಕೆ ಆಗಿರಬಹುದು ಎಂದು ಊಹಿಸಬಹುದಾಗಿದೆ.

Subscribe to:
Posts (Atom)