ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, October 27, 2012

ತೊಂಬತ್ತು

ಬಿಡಿಸಿಕೆ:-
          ತೊಮ್+ಪತ್ತು = ತೊಂಬತ್ತು

ಕಿಟ್ಟೆಲ್ ಅವರ ಇಂಗ್ಲಿಶ್-ಕನ್ನಡ ಪದನೆರಕೆಯಿಂದ:-
          ತೊಮ್= previous, before (ಹಿಂದಿರುವುದು, ಮುಂಚೆಯಿರುವುದು)

ನೂರಕ್ಕೆ ಎಶ್ಟು ಮುಂಚೆಯಿರುವುದು/ಹಿಂದಿರುವುದು ತೊಂಬತ್ತು ? ಎಂಬ ಕೇಳ್ವಿ ಹಾಕಿಕೊಂಡರೆ ನೂರಕ್ಕೆ ’ಹತ್ತು’ ಹಿಂದಿರುವುದು ಯಾವುದು ಅದೇ ’ ತೊಂಬತ್ತು’ ಎಂಬ ಹುರುಳನ್ನು ಕೊಡುತ್ತದೆ Ka. tom-battu
ninety. Koḍ. tom-badï ninety. Tu. soṇpa ninety  [DED 3532]

ತಮಿಳಿನಲ್ಲಿ ಇದು ಕೊಂಚ ಬದಲಾಗಿದೆ. ’ಹತ್ತ’ರ ಬದಲು ’ನೂರು’ ಬಂದಿದೆ. ಅಂದರೆ ನೂರಕ್ಕೆ ಹಿಂದಿರುವುದೇ ’ತೊಣ್ಣೂರು’(=ninety=ತೊಂಬತ್ತು) Ta.  toṇ-ṇūṟu ninety [DED 3532]
  ಇಲ್ಲೆಲ್ಲ ’ತೊಮ್’ (ಕನ್ನಡ ಮತ್ತು ಕೊಡಗು ನುಡಿಗಳಲ್ಲಿ) ಎಂಬ ಮುನ್ನೊಟ್ಟು ಬಳಕೆಯಾಗಿದೆ. ತುಳುವಿನಲ್ಲಿ ಸೊಣ್ಆಗಿದೆ; ತಮಿಳಿನಲ್ಲಿ ’ತೊಣ್’ ಆಗಿದೆ.

2 comments:

  1. ಅದು ತಮಿಳಿನಲ್ಲಿ ತೊನ್ನೂರು, ತೊಣ್ಣೂರು ಅಲ್ಲ. ಅಲ್ಲದೆ,೯೦೦ ಕ್ಕೆ ತಮಿಳು ಮಲೆಯಾಳಗಳಲ್ಲಿ ತೊಳ್ಳಾಯಿರಂ ಅನ್ನುವ ಪದವಿರುವುದನ್ನೂ ಗಮನಿಸಬಹುದು.

    ReplyDelete
  2. ಹವ್ದು ತೊಣ್ಣೂರು ಅಲ್ಲ.. ತೊನ್-ನೂರು
    ಹಾಗೆ ತೊಳ್ಳಾಯಿರಂ = ೯೦೦

    ನಾವು(ಮಯ್ಸೂರು ಕಡೆ) ಅದಕ್ಕೆ 'ಒಮ್ಬಯ್ ನೂರು' ಅಂತಿವಿ.

    ಒಂಬತ್ತು = ಒಮ್ಬಯ್

    ReplyDelete