ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Monday, September 10, 2012

ಮಲಗು

ಮಲಗುವುದು ದಿನಾಲು ಮಾಡುವ ಕೆಲಸಗಳಲ್ಲಿ ಬಲು ತಲೆಮೆಯದ್ದು. 'ಮಲಗು' ಎಂಬುದಕ್ಕೆ ಹಲವು ತರದ ಬಳಕೆಗಳಿವೆ

೧. ಅವನು ಕೋಣೆಗೆ ಹೋಗಿ ಮಲಗಿದನು.
೨. ಅದನ್ನು ಮಲಗಿಸಬೇಡ. ನೆಟ್ಟಗೆ ನಿಲ್ಲಿಸು!
೩. ತಾಯಿಯು ತನ್ನ ಮಗುವನ್ನು ಮಲಗಿಸಿದಳು.
೪. ಅವನು ಬಂದು ಇವರ ವ್ಯಾಪಾರವನ್ನು ಮಲಗಿಸಿಬಿಟ್ಟನು.

ಮಲಗುವುದು ಎಂದರೆ ವಾರೆಯಾಗಿ ಒರಗಿಕೊಳ್ಳುವುದು ಇಲ್ಲವೆ ನೆಟ್ಟಗಿದ್ದ ಮಯ್ಯನ್ನು ಒಂದೆಡೆಗೆ ಡೊಂಕಾಗಿ ಬಗ್ಗಿಸಿ ಅದೇ ಸ್ತಿತಿಯಲ್ಲಿ ಇರುವುದು.

ಮಾಲು/ವಾಲು ಎಂಬುದಕ್ಕೆ ವಾಟ, ಡೊಂಕು, ಕೆಳಕ್ಕೆ ಜಾರುವುದು ಎಂಬ ಹುರುಳುಗಳಿವೆ. ಮಲಗಿದಾಗ ಮಯ್ ಕೂಡ ಒಂದೆಡೆಗೆ ವಾಲಿಕೊಳ್ಳುವುದನ್ನು/ಜಾರಿಕೊಳ್ಳುವುದನ್ನು ಗಮನಿಸಬಹುದು.

ಹಾಗಾಗಿ,

ಮಾಲು <=> ವಾಲು <=> ಮಲಗು - ಈ ಪದಗಳೆಲ್ಲ ಒಂದಕ್ಕೊಂದು ನಂಟಿರುವುದೇ ಎಂದು ಇದರಿಂದ ತಿಳಿಯುತ್ತದೆ. ಉಲಿಕೆಯಲ್ಲೂ ಕೂಡ ಈ ಪದಗಳಲ್ಲಿರುವ ಹೋಲಿಕೆ ಎದ್ದು ಕಾಣುತ್ತದೆ. ಇದಲ್ಲದೆ ತಮಿಳಿನಲ್ಲಿ ’ಮಲಗು’ ಎಂಬ ಪದವನ್ನೇ ಹೋಲುವ ’ಮಲರ್ತ್ತು’ ಎಂಬ ಪದಕ್ಕೂ ’ಕುಸ್ತಿಯಲ್ಲಿ ಎದುರಾಳಿಯ ಬೆನ್ನನ್ನು ನೆಲಕ್ಕೆ ಮುಟ್ಟಿಸುವುದು’ ಎಂಬ ಹುರುಳಿದೆ.

ಮಲಗು, ಮಲಂಗು Ka. malagu, malaṅgu to recline, lie down, rest, incline, bend (intr., as full ears of paddy, etc.); n. pillow, cushion. [DED 4735]


ಮಾಲು, ಮಾಲಿಸು Ka. mālu to bend; māla, mālu sloping, slanting, slope, descent;mālisu to look obliquely, turn the eye and cast a look from the corner, bend to one side (as a post, etc.), behold for a long time. [DED 4825]


ವಾಲು, ಓಲು, ವಾಲುವಿಕೆ Ka. vālu, ōlu to bend, slope, slant; vāluvike sloping, descending [DED 5369]


ಮಲರ್ತ್ತು Ta. malarttu (malartti-)to throw on one's back as in wrestling [DED 4740]-

2 comments:

  1. Naanu Ivattu Tumba Kalithe Sir.
    Tumba Olleya Vishaya hanchiddiri.

    ReplyDelete
  2. "ತಮಿಳಿನಲ್ಲಿ ’ಮಲಗು’ ಎಂಬ ಪದವನ್ನೇ ಹೋಲುವ ’ಮಲರ್ತ್ತು’ ಎಂಬ ಪದಕ್ಕೂ ’ಕುಸ್ತಿಯಲ್ಲಿ ಎದುರಾಳಿಯ ಬೆನ್ನನ್ನು ನೆಲಕ್ಕೆ ಮುಟ್ಟಿಸುವುದು’ ಎಂಬ ಹುರುಳಿದೆ. "
    - ತಪ್ಪು.
    * ಮಲರ್ = ಹಿಂದಕ್ಕೆ ಒರಗಿಸು.
    * ಮಲರ್ತು = ಹಿಂದಕ್ಕೆ ಒರಗುವಂತೆ ಮಾಡು.
    "as in wrestling" ಎಂಬುದು ಕೇವಲ ದೃಷ್ಟಾಂತಕ್ಕಾಗಿ ಕೊಟ್ಟಿರುವಂಥದ್ದು.

    * ಮಲರ್ತು ಎಂಬುದಕ್ಕೆ ಸಮಾನವಾದ ಕನ್ನಡ ಪದ ಮಗುಚು.

    ReplyDelete