ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Thursday, September 27, 2012

ಕೋಟೆ

ಬಹಳ ಹಿಂದಿನ ಕಾಲದಿಂದಲೂ ಕೋಟೆ ಕಟ್ಟುವುದು ಎಲ್ಲ ನಡವಳಿಗಳಲ್ಲೂ ಇದೆ. ಕೋಟೆ ಕಟ್ಟುವುದರಿಂದ ಹಗೆಗಳಿಂದ ದಿಡೀರನೆ ಆಗುವ ದಾಳಿಯನ್ನು ತಪ್ಪಿಸಬಹುದು ಎಂಬುದೇ ಇಲ್ಲಿ ಮುಕ್ಯ ಕಾರಣ. ಲ್ಯಾಟಿನ್ನಿನ fortis ಎಂಬ ಪದದಿಂದ ಇಂಗ್ಲಿಶಿನ fort ಪದ ಬಂದಿದೆ. ಲ್ಯಾಟಿನ್ನಿನಲ್ಲಿ fortis ಎಂದರೆ ಬಲಶಾಲಿ, ಗಟ್ಟಿ ಎಂಬ ಹುರುಳು ಹೊಂದಿದೆ. ಆಗಿನ ಮಂದಿ ಇಲ್ಲವೆ ಅರಸರು ಕೋಟೆ ಎಂದರೆ ಬಲ ಎನ್ನುವಶ್ಟರ ಮಟ್ಟಿಗೆ ಅವರ ಅರಿವು ಇತ್ತು ಎಂಬುದು ಇದರಿಂದ ತಿಳಿಯುತ್ತದೆ. ಆದರೆ ಕನ್ನಡದಲ್ಲಿ ಕೋಟೆ ಎಂಬ ಪದ ಬರುವುದಕ್ಕೆ ಬೇರೆ ದೂಸರುಗಳು ಕಾಣುತ್ತವೆ.

ಕನ್ನಡದಲ್ಲಿ ಕುಡು, ಕುಡ, ಕುಡಿ ಎಂಬ ಪದಗಳು ಮತ್ತು ಇವುಗಳು ಉಲಿಕದಲಿನ(metathesis) ರೂಪಗಳು ಡೊಂಕ, ಡೊಂಕು ಇವೆಲ್ಲವು ವಕ್ರತನವನ್ನು ಕುರಿತಾದ ಪದಗಳಾಗಿವೆ. ಕುಡು, ಕುಡ, ಕುಡಿ Ka. kuḍu, kuḍa, kuḍi state of being crooked, bent, hooked, or tortuous; ḍoṅku to bend, be crooked; ಡೊಂಕು ḍoṅku, ಡೊಂಕ ḍoṅka state of being bent, curved, crooked; crookedness, a bend, a curve [DED 2054]

ಎಲ್ಲಿ ಡೊಂಕುತನ/ವಕ್ರತನವಿರುತ್ತದೆಯೊ ಅಲ್ಲಿ ’ಮೂಲೆ’ಗಳು ಉಂಟಾಗಲು ಸಾದ್ಯವಿದೆ. ಈ ’ಮೂಲೆ’ಗಳಿಗೆ ಇರುವ ಇನ್ನೊಂದು ಪದವೇ ’ಕೋಣ’, ಕೋನ. ಇನ್ನು ಕುಡು=>ಕೋಣ=>ಕೋನ ಆಗಿರುವುದರಲ್ಲಿ ಅಂತಹ ಅಚ್ಚರಿಯೇನಿಲ್ಲ. ’ಕುಡು’ ಯಲ್ಲಿರುವ ’ಉ’ಕಾರವು ’ಕೋಣ’ದ ಕೋ ಎನ್ನುವಲ್ಲಿ ’ಓ’ ಕಾರವಾಗಿದೆ. ಉಕಾರ ಮತ್ತು ಓಕಾರವಾಗುವುದು ಕನ್ನಡದ ಉಲಿಯೊಲವಿನಲ್ಲಿ ಸಹಜವೇ ಆಗಿದೆ. ಇನ್ನು ಡ ಮತ್ತು ಣ ಒಂದೇ ಗುಂಪಿಗೆ/ವರ್ಗಕ್ಕೆ ಅಂದರೆ ’ಟ’ ಗುಂಪಿಗೆ ಸೇರಿದ ಉಲಿಗಳು/ಬರಿಗೆಗಳು. ಕೋಣ್, ಕೋಣ, ಕೋನ Ka. kōṇ, kōṇa, kōṇe, kōna angle, corner Ta. kōṇ crookedness, angle, crossness of disposition [DED 2209]

ಕೋಟೆ ಅಂದರೆ ಹಲವು ಗೋಡೆಗಳನ್ನು ಕೂಡಿಸಿ ಕಟ್ಟಿದ ಒಂದು ಕಟ್ಟೋಣ. ಒಂದೇ ಒಂದು ಗೋಡೆ ಕಟ್ಟಿದರೆ ಅದು ಕೋಟೆಯಾಗುವುದಿಲ್ಲ. ಅದು ಒಂದು ಗೊತ್ತಾದ ಪ್ರದೇಶದ ಸುತ್ತಲೂ ತಲೆಯೆತ್ತಿರಬೇಕು ಆಗಲೆ ಅದು ಕೋಟೆ ಎನಿಸಿಕೊಳ್ಳುವುದು. ಹಾಗಾದರೆ ಸುತ್ತಲಿರುವ ಈ ಗೋಡೆಗಳು ಕೂಡುವ ಜಾಗ ’ಮೂಲೆ’ಗಳನ್ನು ಇಲ್ಲವೆ ’ಕೋನ’ಗಳನ್ನು ಉಂಟುಮಾಡುತ್ತವೆ. ವಿಕಿಪಿಡಿಯಾದಲ್ಲಿ ಕೊಟ್ಟಿರುವ ಕೋಟೆಗಳ ತಿಟ್ಟಗಳನ್ನು ನೋಡಿದರೆ ಗೊತ್ತಾಗುವುದು ಎಲ್ಲಾ ಕೋಟೆಗಳಲ್ಲಿ ಎದ್ದು ಕಾಣುವುದು ಈ ಮೂಲೆಗಳೇ ಅಂದರೆ ಕೋನಗಳೇ/ಕೋಣಗಳೇ.

ಕನ್ನಡದಲ್ಲಿ ’ಕೋ’/ಕು ಎಂಬ ಉಲಿಗಳೇ ಡೊಂಕು/ವಕ್ರ ಎಂಬ ಹುರುಳಗಳನ್ನು ಹೊಂದಿದೆ. ಆದರೆ ಬಳಕೆಯ ನೆಲೆಯಲ್ಲಿ ಇದಕ್ಕೆ
ಹಲವು ರೂಪಗಳಿವೆ. ಹಲವು ರೂಪಗಳಿಗೆ ಹಲವು ಹುರುಳುಗಳನ್ನು ತಳಕು ಹಾಕಲಾಗಿದೆ. ಈ ಹಲವು ಹುರುಳುಗಳನ್ನು ಕಿಟ್ಟೆಲ್ ಅವರ Kannada-English Dictionary F.Kittel, 1894 ಇದರಿಂದ ಎತ್ತಿ ಇಲ್ಲಿ ಕೊಡಲಾಗಿದೆ

ಕೊಂಕು(ಕೊಂಕುನುಡಿ, ಅಡ್ದ ಮಾತು, ವಕ್ರ ಮಾತು)

ಕೊಂಕುಳ್(ಕಂಕುಳು, ಅಂದರೆ ಮೂಲೆ - ಹೆಗಲಿನ ಬಾಗವು ಬಾಗಿ ತೋಳುಗಳಾಗಿ ಮಾರ್ಪಡುವ ಜಾಗ).

ಕುಡುಗೋಲು/ಕುಡುಗ್ಲು ( ಒಂದು ಬಗೆಯ್ ಆಯುದ , ಇದರಲ್ಲಿ ಕುಯ್ಯುವ/ಹರಿತವಾಗಿರುವ ಬಾಗ ಡೊಂಕಾಗಿರುತ್ತದೆ, ಬೆಳೆಗಳನ್ನು ಇಲ್ಲವೆ ಹುಲ್ಲನ್ನು ಕುಯ್ಯಲು ಬಳಸುವ ಸಾದನ)

ಕೊಂಕಿ, ಕೊಕ್ಕೆ (hook, ಏನನ್ನಾದರು ನೇತು ಹಾಕಲು ಈ ಕೊಕ್ಕೆಗಳು ಬೇಕು)

ಕೊಂಗು(ಅಂಕುಡೊಂಕಾದ ಬಂಡೆ/ಬೆಟ್ಟಗಳನ್ನು ಹೊಂದಿರುವ ನಾಡು),

ಕೊಡಗು( ಅಂಕು ಡೊಂಕಾದ ಬೆಟ್ಟಗುಡ್ಡಗಳನಾಡು),

ಕೋಡು/ಕೊಂಬು (ಹಸುವಿನ ಕೊಂಬು),

ಕೋಡಿ(ಅಂಕು ಡೊಂಕಾಗಿ ಹರಿಯುವಿಕೆ),

ಕೊಮೆ/ಕೊಂಬೆ ( ಮರದ ಕಾಂಡದ ಕವಲುಗಳು, branch of a tree)

ಕೊಕ್ಕು (beak, ಹಕ್ಕಿಗಳ ಬಾಗಿರುವ/ಡೊಂಕಾಗಿರುವ ಮೂತಿಯ ತುದಿ)

ಕೊಗ್ಗ ( ಡೊಂಕು, ಡೊಂಕು ದನಿಯ ಮನುಶ್ಯ)

ಕೊಂಚೆ ( a rampart, an enclosure - ಇದು ಕೋಟೆಯ ಹುರುಳನ್ನೇ ಹೊಂದಿದೆ)

ಕೊಡಕು (crookedness, ಡೊಂಕು)

ಕೊಣ್ಡ/ಕೊಂಡ( ಬೆಟ್ಟ, ಪರ್ವತ, mountain ಅಂದರೆ ಅಂಕು ಡೊಂಕಾಗಿರುವುದು), ಕೋತ ( ನೀಲಗಿರಿ ಬೆಟ್ಟದಲ್ಲಿ ವಾಸಿಸುವ)

ಕೊಂಡಿ/ಕೊಣ್ಡಿ(A hook projecting from a awall, a semicircular link ofa padlock ಅಂದರೆ ಡೊಂಕುತನವೇ)

ಕೊನೆ (extremity, point, tip, end, corner ಅಂದರೆ ಮೂಲೆ ಅಂದರೆ ಡೊಂಕುತನವೆ) [DED 2174]

ಕೊಪ್ಪು ( The notched extremity or horn of a bow ಅಂದರೆ ಇದರಲ್ಲು ಡೊಂಕುತನವನ್ನೇ ತೋರುವುದು)

ಕೋಚು/ಕೋಸು( deviation from squarness, as of an awning, wall, road etc ಅಂದರೆ ಡೊಂಕುತನವೆ)

ಕೋಚ/ಕ್ವಾಚ (ವಕ್ರಬುದ್ದಿಯುಳ್ಳವನು), ಕೋಡಂಗಿ, ಕೋತಿ ಇವೆಲ್ಲ ಬುದ್ದಿ/ನಡವಳಿಕೆ ನೆಟ್ಟಗಿಲ್ಲದಿರುವಿಕೆಯನ್ನೇ ಅಂದರೆ ಡೊಂಕನ್ನೇ ತೋರುತ್ತದೆ)

ಕೋಮಟಿತನ ( covetousness - ಇದು ಕೂಡ ಬುದ್ದಿ ನೆಟ್ಟಗಿಲ್ಲದಿರುವುದನ್ನ ತೋರುತ್ತದೆ)

ಕೋರೆ ( crookedness ಅಂದರೆ ಡೊಂಕುತನ)

ಗೋಣ್ಟು ( ಮೂಲೆ, a piont of compass)

ಇಶ್ಟೆಲ್ಲ ಪದಗಳನ್ನು ಕೊಟ್ಟ ಮೇಲೆ ಕೋಟೆ ಎಂಬ ಪದ ಅಂಕುಡೊಂಕಾಗಿ ಕಟ್ಟಿರುವ ಒಂದು ಕಟ್ಟೋಣ ಎಂಬು ತಿಳಿಯದೇ ಇರದು. ಕೋಟೆ(a) Ka. kōṭe fort, rampart; (PBh.)ಕೋಂಟೆ kōṇṭe fort.
ಗೋಡೆ(b) Ka. gōḍe wall. [DED 2207]

ಕೋಟೆಯಲ್ಲಿರುವುದು ’ಕ’ ಮತ್ತು ’ಟ’ ಎಂಬ ಕೊರಲಿಸದ ಮುಚ್ಚುಲಿಗಳು. ಇದೆ ಕೊರಲಿಸಿದ ಮುಚ್ಚುಲಿಗಳಾಗಿ ಮಾರ್ಪಾಟುಗೊಂಡಾಗ ಕ->ಗ ಆಗುತ್ತದೆ, ಟ ->ಡ ಆಗುತ್ತದೆ. ಹಾಗಾಗಿ ಕೋಟೆ ಗೋಡೆಯಾಗಿದೆ. ಬಳಕೆಯ ನೆಲೆಯಲ್ಲಿ ಕೋಟೆ ಎಂಬುದು ಹಲವು ಗೋಡೆಗಳಿಂದಾದ ಒಂದು ಕಟ್ಟೋಣ.

ಮನೆಯ ಒಂದು ಮೂಲೆಯೇ ಕೋಣೆ. ಹಾಗಾಗಿ ಕೋಣೆ ಎಂಬುದು ಇಲ್ಲಿ ಮೂಲೆಯ ಹುರುಳನ್ನೇ ಎತ್ತಿ ತೋರುತ್ತದೆ.
ಕೋಣೆ Ka. kōṇe an inner apartment or chamber, a kitchen. [DED 2211]

1 comment:

  1. "ಕೊಂಕು" - ಈ ವಿಷಯದಲ್ಲಿ ಸೇಡಿಯಾಪು ಮತ್ತೆ ಗೌರೀಶ ಕಾಯ್ಕಿಣಿ ಅವರ ಬರಹಗಳನ್ನು ಓದಿರಿ.

    ಅಂದಹಾಗೆ, ಕೊಂಕು, ಕೋಡು ಈ ಪದಗಳಿಗೆ ಕನ್ನಡದಲ್ಲಿರುವ ಅರ್ಥಕ್ಕೂ ತಮಿಳಿನಲ್ಲಿರುವ ಅರ್ಥಕ್ಕೂ ಗಮಸಿಸಬಲ್ಲ ವ್ಯತ್ಯಾಸವಿರುವುದು ನಿಜ. ಅಲ್ಲಿ ಕೋಡು (ಎಂದರೆ ಗೆರೆ, ಬಾಗಿರಬೇಕೆಂದಿಲ್ಲ), ಕೊಂಗು (ಒಂದು geographical nomenclature) ಮೊದಲಾದುವುಗಳಲ್ಲಿ ಡೊಂಕಾಗಿರುವ ಸೂಚನೆಗಳು ಮರೆಯಾಗಿರುವುದನ್ನ ಗಮನಿಸಬಹುದು.

    ಈ ಪಟ್ಟಿಯಲ್ಲಿ ಕೋನ ಮುಕ್ಕಾಲು ಪಾಲು ಹೊಂದುತ್ತಿಲ್ಲ ನನ್ನೆಣಿಕೆಯಂತೆ - ಇದು ಸಂಸ್ಕೃತದ ಕೋಣ ದಿಂದ ಬಂದಿರುವಂತೆ ತೋರುತ್ತೆ. ಅದರ ಎಟಿಮಾಲಜಿ ಸರಿಯಾಗಿ ತಿಳಿದಿಲ್ಲ. ನೋಡಬೇಕು.

    ReplyDelete