ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Thursday, August 23, 2012

ಮದುವೆ

ಯಾರದೇ ಬಾಳಿನಲ್ಲಿಯೇ ಆದರೂ ಹೊಸದೊಂದು ನಂಟನ್ನು ಬೆಸೆಯುವ ಒಂದು ಗಟ್ಟವೇ ಇದರಿಂದ ಸುರುವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ’ಮದುವೆ’ ಎನ್ನುವ ಪದದಲ್ಲಿ ಈ ’ಬೆಸೆಯುವ’/ಕೂಡುವ ಹುರುಳನ್ನು ಹುದುಗಿಸಿಟ್ಟರಬೇಕೆನೋ ನೋಡೋಣ.

ಬಳಕೆಗಳು:-
೧. ಮದುವೆಯ ದಿಬ್ಬಣ ಹೊರಟಿತು
೨. ಮದುವೆಮನೆ ಇನ್ನು ದೂರ ಇದೆ
೩. ಮದವಣಿಗ ಬರುವ ಹೊತ್ತಾಯಿತು.
೪. ಮದವಣಿಗಿತ್ತಿಯ ಬಿನ್ನಾಣ ನೋಡಿ
೫. ಮದುವೆಗೆ ಒಂದು ಒಳ್ಳೆ ಮುಹೂರ್ತ ನೋಡಿ

ಬಿಡಿಸುವಿಕೆ:-
ಬೇರಿನ ಪದವೇ ಮದ ಎಂದಿದೆ ..ಇದರಿಂದ ಮದಲ್ ಮದಿವೆ, ಮದುವೆ, ಮದವಣಿಗೆ, ಮದವಣಿಗಿತ್ತಿ, ಮದವನ(ಮಯ್ದುನ- ಗಂಡನ ತಮ್ಮ, ಹೆಂಡತಿಯ ತಮ್ಮ) ಈ ಪದಗಳು ಮೂಡಿ ಬಂದಿವೆ.
Ka. mada joining, wedding, marriage; madal, madive, maduve wedding, marriage; madaliga, madavaṇiga bridegroom; madaligitti, madavaṇigitti, madavaḷige, (K.2) madevaḷ bride; madavana man connected by marriage, husband [DED 4694]

ಕಿಟ್ಟೆಲರವರು ’ಮದ’ ಎಂಬ ಪದವೇ ’ಮಡು’ ಎಂಬುದರಿಂದ ಬಂದಿರಬಹುದೆಂಬ ಸುಳುಹು ಕೊಟ್ಟಿದ್ದಾರೆ. Ka. maḍu to put firmly together, join closely [DED 4681]

ಮಡು ಎಂಬ ಪದಕ್ಕೆ ಕಿಟ್ಟೆಲ್ಲರು ಈ ರೀತಿ ಇಂಗ್ಲಿಶಿನಲ್ಲಿ ಹುರುಳನ್ನು ಕೊಟ್ಟಿದ್ದಾರೆ.

ಪೊಡ+ಮಡು=ಪೊಡಮಡು=ಪೊಡವಡು ( ಕಯ್ಗಳನ್ನು ಜೋಡಿಸಿ ಬೊಗಸೆಯ ತರ ಮಾಡಿಕೊಂಡು ಆಮೇಲೆ ಅದನ್ನು ಹಣೆಯವರೆಗೂ ಎತ್ತಿ ಗೌರವ ತೋರಿಸುವುದು)=ತುೞಿಲ್= ಎಱಗು= ಮಣಿ= ನಮಸ್ಕಾರ

ಇದನ್ನು ಬೇಂದ್ರೆಯವರು ಕೂಡ ತಮ್ಮ ’ಗಂಗಾವತರಣ’ ಎಂಬ ಪದ್ಯದಲ್ಲಿ ಹೀಗೆ ಬಳಸಿದ್ದಾರೆ

       ಇಳಿದು ಬಾ ತಾಯಿ ಇಳಿದು ಬಾ

       ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
       ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
      ಇಳಿದು ಬಾ ತಾಯಿ ಇಳಿದು ಬಾ

      ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ

ಒಟ್ಟಿನಲ್ಲಿ ’ಮದುವೆ’ಗೂ ’ನಮಸ್ಕಾರ’ಕ್ಕೂ ನಂಟಿದೆ ಎಂದು ತೋರುತ್ತದೆ. ಹಾಗಾಗಿ ಹಿರಿಯರು ಹೇಳುವ ಮಾತು ’ಎರಡು ಕಯ್ ಒಂದಾದ ಹಾಗೆ ಎರಡು ಜೀವಗಳು ಒಂದಾಗಬೇಕು’ ಅಂದರೆ ’ಮದುವೆ’ ಆಗಬೇಕು ಎಂಬುದು ಎಶ್ಟು ಹುರುಳಿರುವ ನುಡಿ ಎಂಬುದು ಇದರಿಂದ ತಿಳಿಯುತ್ತದೆ.

4 comments:

  1. ಕಿಟ್ಟೆಲ್ ತೆಗೆದು ನೋಡಿದೆ - ಒಂದು ವ್ಯತ್ಯಾಸ ಕಂಡಿತು;

    ಪೊಡ - ಸಂಸ್ಕೃತದ ಪುಟದ ತದ್ಭವ - A hollow formed by joining tha palms ; ಇದರಮುಂದೆ ವಡು/ಮಡು ಬಂದು ಪೊಡವಡಿಕೆ/ಪೊಡಮಡಿಕೆ/ಪೊಡವಡು ಮೊದಲಾದ ಪ್ರಯೋಗಗಳು ಬಂದಿವೆ.

    ಹಾಗೇ ಮದ=ಮಡ ಅನ್ನುವ ಎಂಟ್ರೀ ಸಿಕ್ತಿಲ್ಲ - ಯಾವ ಪುಟದಲ್ಲಿದೆ ಹೇಳ್ತೀರಾ? ನಾನು ನೋಡ್ತಿರೋದು ೧೮೯೯ ರ ಆವೃತ್ತಿ. ಇದು ಪೂರ್ತಿ ಇದೆಯೋ ಇಲ್ಲ ಸಂಕ್ಷಿಪ್ತಗೊಳಿಸಿದ್ದೋ ಅನ್ನೋದು ನನಗೆ ಗೊತ್ತಿಲ್ಲ.

    ReplyDelete
    Replies
    1. ಹಂಸಾನಂದಿ ಅವರ ಬಿಡಿಸುವಿಕೆ ಸರಿ ಅನ್ನಿಸುತ್ತೆ.
      ಪುಟ=> ಪೊಡ + ಪಡು=>ವಡು=>ಮಡು= ಪೊಡಮಡು
      ಪೊರ+ಪಡು= ಪೊರವಡು, ಪೊರಮಡು, ಪೊರಡು ಎಂಬಂತೆ

      Delete
  2. ಹಂಸಾನಂದಿ,
    'ಮದ' ಎಂಬ ಎಂಟ್ರಿ ನೋಡಿ. ಅದರಲ್ಲಿ 'probably from ಮಡ' ಎಂಬ ಸುಳಿವು ಕೊಟ್ಟಿದ್ದಾರೆ.
    ಪೊಡ ತದ್ಬವ ಅಂತ ಕೊಟ್ಟಿದ್ರು . ಅದಕ್ಕೆ 'ಪುಟ' ಎಂತಶ್ಟ್ ಅರ್ತ ಇರುವುದು

    ReplyDelete
  3. ತಮಿಳಿನಲ್ಲಿ "ವದುವೈ" ಎಂಬ ಜ್ಞಾತಿ ಶಭ್ದ ಇದೆ. ಈ ಸೊಲ್ಲಿಗೆ ಮದುವೆ, ಮದುಮಗಳು, ಮೈಥುನ, ವರಮಾಲೆ, ಸುಗಂಧ, ಬಲವಂತ(compulsion) ಈ ಅರ್ಥಗಳಿವೆ

    ReplyDelete